ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರೂ ತಮ್ಮದೇಯಾದಂತಹ ನಿರ್ಮಾಣ ಹಾಗೂ ಆಡಿಯೋ ಸಂಸ್ಥೆಯನ್ನ ಹುಟ್ಟುಹಾಕಿದ್ದರು ಪುನೀತ್ ರಾಜ್ ಕುಮಾರ್ …
ಪಿಆರ್ ಕೆ ಹೆಸರಿನಲ್ಲಿ ನಿರ್ಮಾಣ ಹಾಗೂ ಆಡಿಯೋ ಸಂಸ್ಥೆಯನ್ನು ಆರಂಭಿಸಿದ ಪುನೀತ್ ರಾಜಕುಮಾರ್ ಅದರ ಅಡಿಯಲ್ಲಿಯೇ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆಯನ್ನು ಮಾಡಿದರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ನಿರ್ಮಾಣ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದ್ದರು ಅಪ್ಪು ಅಕಾಲಿಕ ಮರಣದಿಂದ ಈಗಾಗಲೇ ಶುರುವಾಗಬೇಕಿದ್ದ ಮತ್ತು ಶುರುವಾಗಿದ್ದ ಸಿನಿಮಾಗಳ ಕಥೆ ಏನು ಅನ್ನೋದು ನವನಿರ್ದೇಶಕರ ಚಿಂತೆ ಆಗಿತ್ತು… ಆದರೆ ಈಗ ಪಿಆರ್ ಕೆ ಸಂಸ್ಥೆ ಯಿಂದ ಈ ಬಗ್ಗೆ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ ..
ಪಿಆರ್ ಕೆ ಸಂಸ್ಥೆ ಯಿಂದ ಅವಕಾಶ ಪಡೆದುಕೊಂಡಿದ್ದ ನಿರ್ದೇಶಕರು ಹಾಗೂ ಕಲಾವಿದರಿಗೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಮಾಧಾನ ತರುವಂತಹ ಸುದ್ದಿಯೊಂದನ್ನು ನೀಡಿದ್ದಾರೆ ..
ನಾವು ಮತ್ತೆ ಕೆಲಸ ಆರಂಭಿಸುತ್ತೇವೆ ಎಂದು ಪಿಆರ್ ಕೆ ಸಂಸ್ಥೆ ತಿಳಿಸಿದೆ…ನಮಗೆ ಹಿಂದಿನಿದನ್ನು
ಬದಲಿಸಲು ಅಸಾಧ್ಯವಾಗಿದೆ.. ಆದರೆ ಪುನೀತ್ ರಾಜ್ ಕುಮಾರ್ ಕೊಟ್ಟಿರುವ ಸ್ಫೂರ್ತಿ ಹಾಗೂ ಉತ್ಸಾಹದೊಂದಿಗೆ ಪಿಆರ್ ಕೆ ಪ್ರೊಡಕ್ಷನ್ ಮತ್ತು ಪಿಆರ್ ಕೆ ಆಡಿಯೋ ಮೂಲಕ ಉಜ್ವಲ ಭವಿಷ್ಯ ರೂಪಿಸಲು ಎದುರು ನೋಡುತ್ತಿದ್ದೇವೆ ..ನಮ್ಮ ಈ ಪ್ರಯಾಣವನ್ನು ಮುಂದುವರಿಸುತ್ತಾ ಅವರ ಅಂದರೆ ಪುನೀತ್ ರಾಜ್ ಕುಮಾರ್ ಅವರ ಕನಸು ನನಸು ಮಾಡಲು ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರೆಸ್ ನೋಟನ್ನು ಬಿಡುಗಡೆ ಮಾಡಿದ್ದಾರೆ …ಈ ಮೂಲಕ ಅಧಿಕೃತವಾಗಿ ಇನ್ನುಮುಂದೆ ಪಿಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್ ಕೆ ಆಡಿಯೋ ಸಂಸ್ಥೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಡೆತನದಲ್ಲಿ ಮುಂದುವರಿಯಲಿದೆ ಅನ್ನೋದನ್ನು ಕನ್ಫರ್ಮ್ ಆಗಿದೆ ಅದಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣತಾಣಕ್ಕೂ ಎಂಟ್ರಿಕೊಟ್ಟಿದ್ದಾರೆ …