ಪುನೀತ್ ಕಂಡಿದ್ದ ಬಹುದಿನದ ಕನಸೊಂದು ನನಸಾಗುವ ಸಂದರ್ಭ ಬಂದಿದೆ …ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಮಾಡಿದ್ದರು..ಅದಕ್ಕಾಗಿ ಕಾಡು ಮೇಡುಸುತ್ತಾಡಿದ್ರು… . ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದ್ದು ಇದರ ಟೀಸರ್ ನವೆಂಬರ್ 1ರಂದು ತೆರೆಗೆ ಬರಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು….
ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಪುನೀತ್ ಕಂಡಿದ್ದ ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದ್ದರು. ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ರಿಲೀಸ್ ಮಾಡುವ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿಂತನೆ ಮಾಡಿದ್ದಾರೆ.
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂದು ಪುನೀತ್ ಪೋಸ್ಟ್ ಮಾಡಿದ್ದರು. ಅಲ್ಲದೆ, ನವೆಂಬರ್ 1ಕ್ಕಾಗಿ ಕಾಯಿರಿ ಎಂದು ಹೇಳಿದ್ದರು. ಆ ಸಮಯ ಈಗ ಬಂದಿದೆ.
ಈ ವಿಚಾರದ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಆದರೆ ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದು ಬರೆದುಕೊಂಡಿದ್ದಾರೆ.