ನಟ ಪುನೀತ್ ರಾಜ್ ಕುಮಾರ್ ಸಿನಿಮಾಗಳಲ್ಲಿ ಅಭಿನಯ ಮಾಡುವುದರ ಜೊತೆಗೆ ತಮ್ಮ ಜೀವನವನ್ನ ಸಖತ್ ಎಂಜಾಯ್ ಮಾಡ್ತಾ ಇದ್ರು…. ಪುನೀತ್ ರಾಜ್ ಕುಮಾರ್ ಅವರಿಗೆ ಪ್ರವಾಸ ಮಾಡುವುದು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ಅಂದರೆ ತುಂಬಾನೇ ಇಷ್ಟವಾಗಿತ್ತು …
ಪುನೀತ್ ರಾಜ್ ಕುಮಾರ್ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿದ್ದ ಅಮೋಘವರ್ಷ ಅವರ ಜತೆಗೂಡಿ ಕರ್ನಾಟಕದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದರು …ಆ ಡಾಕ್ಯುಮೆಂಟರಿಯ ಟೀಸರ್ ಹಾಗೂ ವೀಡಿಯೋವನ್ನು ನವಂಬರ್ ಒಂದರಂದು ಬಿಡುಗಡೆ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು ಅಪ್ಪು.. ಆದರೆ ದುರದೃಷ್ಟವಶಾತ್ ಪುನೀತ್ ಅಕಾಲಿಕ ಮರಣ ಹೊಂದಿದ್ದರು ..
ಇದು ಅಪ್ಪು ಕಂಡ ಮಹತ್ವದ ಕನಸಾಗಿತ್ತು ಕರುನಾಡನ್ನು ಅದ್ಬುತವಾಗಿ ಜನರ ಮುಂದೆ ತೆರೆದಿಡಬೇಕು ಅನ್ನೋದು ಅಪ್ಪು ಆಸೆಯಾಗಿತ್ತು.. ಆದರೆ ಅದು ಪುನೀತ್ ಬದುಕಿರುವಷ್ಟು ದಿನ ನನಸಾಗಲೇ ಇಲ್ಲ …ಅಪ್ಪು ಕಂಡ ಆ ಕನಸನ್ನ ಈಗ ಅವರ ಪತ್ನಿ ಅಶ್ವಿನಿ ನನಸು ಮಾಡುತ್ತಿದ್ದಾರೆ…
ಡಿಸೆಂಬರ್ 6ಕ್ಕೆ ಡಾಕ್ಯುಮೆಂಟರಿ ಟೈಟಲ್ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ’ ಎಂದು ಅಶ್ವಿನಿ ಬರೆದುಕೊಂಡಿದ್ದಾರೆ.