ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನ ನಂಬಲು ಇಂದಿಗೂ ಯಾರು ತಯಾರಿಲ್ಲ..ಪುನೀತ್ ಸತ್ತ ನಂತ್ರ ಸೈಲೆಂಟ್ ಆಗಿಯೇ ಅಪ್ಪು ಮಾಡಿದ ಕೆಲಸಗಳು ಬೆಳಕಿಗೆ ಬಂದವು. ಅಪ್ಪು ಅಂತಿಮ ದರ್ಶನ ಪಡೆಯಲು ಬಂದ 25 ಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಬಾಯಲ್ಲಿತ್ತು ಅಪ್ಪು ಸಹಾಯ ಮಾಡಿದ ಸತ್ಯ. ಹೇಗೆ ಸಹಾಯ ಮಾಡಿದ್ದರು, ಯಾವ ರೀತಿ ನೋಡಿಕೊಂಡರು ಎಂದು ಅಭಿಮಾನಿಗಳೇ ಹೇಳುತ್ತಿದ್ದರು.
ಬದುಕಿದ್ದಾಗ ಅಪ್ಪು ಸಾಕಷ್ಟು ದಾನಧರ್ಮಗಳನ್ನ ಮಾಡಿದ್ದರು…ನಂತರ ಅವೆಲ್ಲವೂ ಹೊರಗೆ ಬಂದು ಪವರ್ ಸ್ಟಾರ್ ರನ್ನ ಕೊಂಡಾಡಿದ್ರು…ಬದುಕಿದ್ದಾಗ ಸಾಕಷ್ಟು ದಾಖಲೆಗಳನ್ನ ಮಾಡಿದ ಪುನೀತ್ ಸತ್ತ ನಂತ್ರವೂ ದಾಖಲೆ ಬರೆದಿದ್ದಾರೆ….
ಪ್ರತಿ ವರ್ಷವೂ ಗೂಗಲ್ ಒಂದು ಲಿಸ್ಟ್ ರಿವೀಲ್ ಮಾಡುತ್ತದೆ. ವರ್ಷದ ಕೊನೆಯಲ್ಲಿ ಗೂಗಲ್ ನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆಗಿರುವ ವ್ಯಕ್ತಿಗಳು ಯಾರೆಂದು ಅನೌನ್ಸ್ ಮಾಡುತ್ತದೆ.. ಸಾಮಾನ್ಯಾವಾಗಿ ಹೆಚ್ಚು ಬಾಲಿವುಡ್ ಸ್ಟಾರ್ ನಟರು ಈ ಲಿಸ್ಟ್‌ನಲ್ಲಿ ಇರುತ್ತಿದ್ದರು…ಆದರೆ ಈ ವರ್ಷ ನಮ್ಮ ಹೆಮ್ಮೆಯ ಕನ್ನಡಿಗ ಪುನೀತ್ ರಾಜ್‌ಕುಮಾರ್ ಎಂದು ರಿವೀಲ್ ಮಾಡಿದೆ. ಹೀಗಾಗಿ ಗೂಗಲ್‌ಗೂ ಗೊತ್ತು ನಮ್ಮ ಅಪ್ಪು ಗತ್ತು ಎಂದು ಅಭಿಮಾನಿಗಳು ಈ ವಿಚಾರವನ್ನು ವೈರಲ್ ಮಾಡುತ್ತಿದ್ದಾರೆ..ಈ ಮೂಲಕ ಅಪ್ಪು ಮತ್ತೆ ದಾಖಲೆ ಬರೆದಿದ್ದಾರೆ…