ಪವರ್ ಸ್ಟಾರ್ ಇಲ್ಲ ಅನ್ನೋದು ಯಾರು ಕೂಡ ಅರಗಿಸಿಕೊಳ್ಳಲಾಗದ ವಿಚಾರ..ಆದರೆ ದಿನ ಕಳೆದಂತೆ ವಾಸ್ತವಕ್ಕೆ ಒಗ್ಗಿಕೊಳ್ಳಲೇಬೇಕು…ಪ್ರತಿಯೊಬ್ಬರನ್ನು ಪ್ರೀತಿಯಿಂದಲೇ ಕಾಣುತ್ತಿದ್ದರು ಪವರ್ ಸ್ಟಾರ್ …
ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ಮೌಲ್ಯಗಳು , ಸಾಧನೆ , ಸಂದೇಶ ಮತ್ತು ಎಲ್ಲಾ ಅಮೂಲ್ಯ ನೆನಪುಗಳನ್ನು ಅನಾವರಣಗೊಳಿಸಲು ಕರುನಾಡ ರತ್ನ ಎನ್ನುವ ಕಾರ್ಯಕ್ರಮವನ್ನು GKGS ಟ್ರಸ್ಟ್ ಮತ್ತು ವರುಣ್ ಸ್ಟುಡಿಯೊಸ್ ವತಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್. ರಾಘವೇಂದ್ರ ರಾಜ್ ಕುಮಾರ್. ಮಂಗಳ ರಾಘವೇಂದ್ರ ರಾಜ್ ಕುಮಾರ್ . ರವಿಚಂದ್ರನ್ ಭಾಗಿ ಆಗಿದ್ದಾರೆ…ಇನ್ನು ರಾಜಕೀಯ ಕ್ಷೇತ್ರದಿಂದ ಡಿಕೆ ಸುರೇಶ್. ರೇಣುಕಾಚಾರ್ಯ ಇನ್ನು ಅನೇಕರು ಭಾಗಿ ಆಗಿದ್ದಾರೆ..
ಇನ್ನು ಈ ಕಾರ್ಯಕ್ರಮವು Zee ಕನ್ನಡ ಚಾನೆಲ್ ನಲ್ಲಿ ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.ಮನೆ ಮನೆಯ ರತ್ನ , ಕರ್ನಾಟಕ ರತ್ನ ನಮ್ಮ ನೆನಪಲ್ಲಿ ಚಿರಸ್ಥಾಯಿಯಾದ ಅಪ್ಪು ಅವರಿಗೆ ಈ ನಮನ ಅನ್ನೋ ಉದ್ದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ವರುಣ್ ….