ನಟ ಪುನೀತ್ ರಾಜ್ ಕುಮಾರ್ ತೆರೆಯ ಮೇಲಷ್ಟೇ ಅಲ್ಲದೆ ರಿಯಲ್ ಲೈಫ್ ನಲ್ಲಿಯೂ ಸಖತ್ ಸಿಂಪಲ್ ಆಗಿದ್ರು…. ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುತ್ತಿದ್ದ ಅಪ್ಪು ಜೀವನಪರ್ಯಂತ ಸಿಂಪಲ್ ಲೈಫ್ ಲೀಡ್ ಮಾಡಬೇಕೆಂದು ಬಯಸಿದವರು …
ಅಪ್ಪು ರನ್ನ ಭೇಟಿ ಮಾಡಿದ ಪ್ರತಿಯೊಬ್ಬರಿಗೂ ಅವರ ಸರಳತೆಯ ಪರಿಚಯವಿತ್ತು… ಅದಷ್ಟೇ ಅಲ್ಲದೆ ಅವರು ಎಷ್ಟು ಸಿಂಪಲ್ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ …ಇತ್ತೀಚೆಗಷ್ಟೇ ಪುನೀತ್ ನಿರ್ಮಾಣದ ,ನಟನೆಯ ಡಾಕ್ಯುಮೆಂಟರಿ ಟೀಸರ್ ಬಿಡುಗಡೆಯಾಗಿದೆ …ಈ ಡಾಕ್ಯುಮೆಂಟರಿಯನ್ನು ಅಮೋಘವರ್ಷ ನಿರ್ದೇಶನ ಮಾಡಿದ್ದು ಟೀಸರ್ ಬಿಡುಗಡೆಗೂ ಮುನ್ನ ಟೀಸರ್ ನೋಡಿದ ಪುನೀತ್ ಈ ಟೀಸರ್ ನಲ್ಲಿ ನನ್ನ ಹೆಸರಿನ ಜೊತೆಗೆ ಪವರ್ ಸ್ಟಾರ್ …ಎನ್ನುವ ಬಿರುದು ಬೇಡ ಎಂದು ಹೇಳಿದ್ದರಂತೆ ..
ಈ ಮೂಲಕ ಪುನೀತ್ ತಾವಾಗಿ ಇರಲು ಬಯಸಿದ್ದರು ಅಂದರೆ …ಸ್ಟಾರ್ ಗಿರಿ ಬಿಟ್ಟು ಸಾಮಾನ್ಯರಂತೆ ಎಲ್ಲರಲ್ಲಿಯೂ ಬೆರೆಯುವ ಆಸೆಯನ್ನು ವ್ಯಕ್ತಪಡಿಸಿದ್ದರು ಎಂದು ಅಮೋಘವರ್ಷ ಹೇಳಿಕೊಂಡಿದ್ದಾರೆ ..
ಗಂಧದಗುಡಿ ಡಾಕ್ಯುಮೆಂಟರಿ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದ್ದು..ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.. ಮುಂದಿನ ವರ್ಷ ಗಂಧದ ಗುಡಿ ಸಿನಿಮಾ ರೀತಿಯಲ್ಲಿ ಥಿಯೇಟರ್ ನಲ್ಲಿ ಪ್ರದರ್ಶನವಾಗಲಿದೆ….