ಯುವರತ್ನ ಕನ್ನಡದ ಕಣ್ಮಣಿ ಎಂತಲೇ ಹೇಳಬಹುದಾದ ಕನ್ನಡಿಗರ ನೆಚ್ಚಿನ ಅಪ್ಪು ನಮ್ಮನಗಲಿ ಕೆಲವು ದಿನಗಳು ಕಳೆದಿವೆ. ಅವರ ಅಗಲಿಕೆಯ ನಂತರ ಅವರ ಹಲವಾರು ಒಳ್ಳೆಯ ಕೆಲಸಗಳ ಬಗ್ಗೆ ಒಂದೊಂದಾಗಿ ತಿಳಿಯುತ್ತಿದೆ.
ಇತ್ತೀಚೆಗೆ ಅವರ ಬಗ್ಗೆ ನಮಗೆ ತಿಳಿದಿರದ ಇನ್ನೊಂದು ವಿಷಯವನ್ನು ಅಪ್ಪುರವರ ಮಾಜಿ ಮ್ಯಾನೇಜರ್ ಒಬ್ಬರು ಹಂಚಿಕೊಂಡಿದ್ದಾರೆ.
ಅದೇನೆಂದರೆ, ಅಪ್ಪುರನ್ನು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಸೇರುವಂತೆ ಕೇಳಿದ್ದರು.
ಆದರೆ ಪುನೀತ್ ರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದಿರುವುದರಿಂದ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ.
ಆ ನಂತರ ಅವರು ಮೋದಿಯವರನ್ನೇ ಬೇಟಿ ಮಾಡಿದ್ದರು ಆದರೆ ಅದು ರಾಜಕೀಯ ಕಾರಣಗಳಿಂದಲ್ಲ ಬದಲಾಗಿ ವರನಟ ಡಾ ರಾಜ್ ಕುಮಾರ್ ರವರ ಬಗೆಗಿನ ಪುಸ್ತಕವನ್ನು ಮೋದಿಯವರಿಗೆ ನೀಡಲು ಅವರು ಪ್ರಧಾನಿಯವರನ್ನು ಬೇಟಿ ಮಾಡಿದ್ದರು ಎಂದು ಹೇಳಿದ್ದಾರೆ.
ಒಟ್ಟಾರೆ ಯಾವುದೇ ಅತಿಯಾಸೆ ಇಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ರೀತಿಯಲ್ಲಿ ಜನಸೇವೆ ಮಾಡಿ ಜನಸೇವೆಗೆ ಅಧಿಕಾರವೇ ಬೇಕೆಂದೇನಿಲ್ಲ ಎನ್ನುವುದನ್ನು ನಿರೂಪಿಸಿ ಹೋಗಿದ್ದಾರೆ.
ನಮ್ಮ ಅಪ್ಪು ಮರೆಯಲಾಗದ ಮಾಣಿಕ್ಯ..
ಅಪ್ಪು ಅಮರ ಅವರ ಜೀವನ ಮಾರ್ಗ ಮನುಕುಲಕ್ಕೆ ದಾರಿದೀಪ.