Karnataka Bhagya

ಪುಷ್ಪ ಸಿನಿಮಾಗೆ ಖಡಕ್ ವಾರ್ನಿಂಗ್ ಕೊಟ್ಟ ಆಂಧ್ರ ಸರ್ಕಾರ

ಪುಷ್ಪಾ ಚಿತ್ರವು ಪೋಸ್ಟ್ ಪ್ರೊಡಕ್ಷನ್‌ ಮುಗಿಸಿ ತೆರೆಗೆ ಬರಲು ಸಿದ್ದವಾಗಿದೆ. ಡಿಸೆಂಬರ್ 17 ರಂದು ಸಿನಿಮಾ ರಿಲೀಸ್ ಆಗಲಿದ್ದು..ಈಗಾಗಲೇ ಚಿತ್ರದ ಟ್ರೇಲರ್‌ ಭಾರಿ ಸದ್ದು ಮಾಡಿದ್ದು, ಹಾಡಿಗಳು ಟ್ರೆಂಡ್ ಸೆಟ್ ಮಾಡುತ್ತಿವೆ…ಸಿನಿಮಾ‌ ಬಗ್ಗೆ ಭಾರಿ ನಿರೀಕ್ಷೆಗಳಿದ್ದು ಅಭಿಮಾನಿಗಳು ಪುಷ್ಪರಾಜ್ ಕಥೆಯನ್ನ ಕಣ್ತುಂಬಿಕೊಳ್ಳಲು ಕಾದಿದ್ದಾರೆ…ಸಿನಿಮಾತಂಡ ಕೂಡ ಚಿತ್ರ ಬಿಡುಗಡೆಯ ಸಂಭ್ರಮದಲ್ಲಿದೆ ಎಲ್ಲವೂ ಸೂಪರ್ ಆಗಿರೋ ಸಂಧರ್ಭದಲ್ಲಿ ಪುಷ್ಪ ಸಿನಿಮಾದ ನಿರ್ಮಾಪಕರಿಗೆ ಸಮಸ್ಯೆಯೊಂದು ಎದುರಾಗಿದೆ…ಅದು ಆಂಧ್ರಪ್ರದೇಶದಲ್ಲಿ ಟಿಕೆಟ್ ದರ.

ಇತ್ತೀಚಿಗೆ ಆಂಧ್ರ ಪ್ರದೇಶದ ಹೊಸ ಕಾನೂನಿನ ಅಡಿಯಲ್ಲಿ ಸಿನಿಮಾ ಹಾಲ್‌ಗಳು ಚಲನಚಿತ್ರ ಟಿಕೆಟ್ ಗಳನ್ನು ಇನ್ಮುಂದೆ ಮಾರಾಟ ಮಾಡುವಂತಿಲ್ಲ. ರಾಜ್ಯ ಸರ್ಕಾರ ಮಾತ್ರ ಇದನ್ನು ಮಾಡಬಹುದು. ಹೌದು, ರಾಜ್ಯ ಸರ್ಕಾರ ನಡೆಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಿನಿಮಾ ಹಾಲ್‌ಗಳು ತಮ್ಮ ಚಲನಚಿತ್ರ ಟಿಕೆಟ್‌ಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಆಂಧ್ರ ಪ್ರದೇಶ ವಿಧಾನಸಭೆ ಅಂಗೀಕರಿಸಿದೆ. ಈಗ ಈ ಬೆಳವಣಿಗೆ ಚಿತ್ರ ನಿರ್ಮಾಪಕರಿಗೆ ತಲೆ‌ನೋವಾಗಿದೆ…

ಟಿಕೆಟ್ ದರಗಳು ಕಡಿಮೆ ಮಾಡುವುದರಿಂದ ಬಿ, ಸಿ ಮತ್ತು ಡಿ ಸೆಂಟರ್‌ಗಳಲ್ಲಿ ಎಸಿ ಥಿಯೇಟರ್‌ಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು ಅನೇಕ ವ್ಯಾಪಾರ ಪಂಡಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.. ನಿರ್ಮಾಪಕರು,ವಿತರಕರ ನಿಯೋಗವು ಸಚಿವ ಪೆರ್ಣಿ ನಾಣಿ ಅವರನ್ನು ಭೇಟಿ ಮಾಡಿತು ಆದರೆ ಆ ಸಭೆಯಿಂದ ಏನೂ ಉಪಯೋಗವಾಗಲಿಲ್ಲ…ಹಿಂದಿನ ಸರ್ಕಾರದ ಅವಧಿಯಲ್ಲಿ, ವಿತರಕರು ನ್ಯಾಯಾಲಯಕ್ಕೆ ಹೋಗಿ ಒಂದು ಅಥವಾ ಎರಡು ವಾರಗಳವರೆಗೆ ಟಿಕೆಟ್ ಹೆಚ್ಚಳಕ್ಕೆ ಅನುಮತಿ ಪಡೆಯುತ್ತಿದ್ದರು…

ಈ‌ ಭಾರಿಯೂ ಅದೇ ರೀತಿ‌ AP ಸರ್ಕಾರವು GO ಅನ್ನು ಪರಿಷ್ಕರಿಸುತ್ತದೆಯೇ ಎಂದು ಪುಷ್ಪ ತಂಡ ಪ್ಲಾನ್ ಮಾಡಿತ್ತು …, ಟಿಕೆಟ್ ಹೆಚ್ಚಳಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿತು. ಆದ್ರೆ‌ ಇದ್ಯಾವುದು ಉಪಯೋಗಕ್ಕೆ ಬಂದಿಲ್ಲ…

ಮೂಲಗಳ ಪ್ರಕಾರ ಇದೇ ವಿಚಾರವಾಗಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದರೆ ಸರ್ಕಾರವು ಚಿತ್ರಮಂದಿರಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ ಎಂದು ಎಪಿ ಸರ್ಕಾರ ಪುಷ್ಪ ಸಿನಿಮಾತಂಡಕ್ಕೆ ಎಚ್ಚರಿಸಿದ್ಯಂತೆ…ಆಂಧ್ರದ ಹಲವು ಥಿಯೇಟರ್‌ಗಳಿಗೆ ಸರಿಯಾದ ಪರವಾನಗಿ ಇಲ್ಲ ಎಂಬುದು ಬಹಿರಂಗ ಸತ್ಯ. ಸರ್ಕಾರವೀ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಲ್ಲಿ ರಾಜ್ಯದಲ್ಲಿ ಸಿನಿಮಾಗಳ ವ್ಯವಹಾರಕ್ಕೆ ಕಷ್ಟವಾಗಲಿದೆ…

ಸದ್ಯ ಅನಿವಾರ್ಯವಾಗಿ ಯಾವುದೇ ಬೇರೆ ದಾರಿ ಇಲ್ಲದೆ.. ನಿರ್ಮಾಪಕರುಗಳು ಸರ್ಕಾರದ ಆದೇಶಗಳನ್ನು ಪಾಲಿಸಲೇಬೇಕಾಗಿದೆ…ಪುಷ್ಪ ಮಾತ್ರವಲ್ಲದೆ RRR, ರಾಧೆ ಶ್ಯಾಮ್ ಮತ್ತು ಇತರ ದೊಡ್ಡ ಚಿತ್ರಗಳು ಬಿಡುಗಡೆಗೆ ಅಣಿಯಾಗಿರುವುದರಿಂದ, ತೆಲುಗು ಚಿತ್ರರಂಗದ ನಿರ್ಮಾಪಕರು ಈ ಸಮಸ್ಯೆಯನ್ನು ನಿಭಾಯಿಸಲು ಮತ್ಯಾವ ಮಾಸ್ಟರ್ ಪ್ಲಾನ್ ಮಾಡ್ತಾರೆ ಕಾದು ನೋಡಬೇಕು…

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap