ನಟ ನೀನಾಸಂ ಸತೀಶ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಹೊಸ ಸಿನಿಮಾ ಈಗಾಗಲೇ 3ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ…
ಅಯೋಗ್ಯ ಸಿನಿಮಾ ಮೂಲಕ ಸಕ್ಸಸ್ ಫುಲ್ ಜೋಡಿ ಎನಿಸಿಕೊಂಡಿದ್ದ ರಚಿತಾ ಹಾಗೂ ಸತೀಶ್ ಮತ್ತೆ ಮೋಡಿ ಮಾಡಲು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ ..
ಸದ್ಯ ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸತೀಶ್ ಮತ್ತು ರಚಿತಾ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…
ಮತ್ತೊಂದು ವಿಶೇಷ ಅಂದರೆ ಸತೀಶ್ ಗಾಗಿ ನಟಿ ರಚಿತಾ ರಾಮ್ ಕವನ ಬರೆದಿದ್ದಾರೆ …
ಆಕಾಶದಲ್ಲಿ ಮೋಡ ಇದ್ರೆ ಮಳೆ ಬರ್ತದೆ
ಥಿಯೇಟರ್ ಗೆ ಜನ ಬಂದ್ರೆ ಹಣ ಬರ್ತದೆ
ಮ್ಯಾಥ್ಯೂ ಸಿನಿಮಾದಲ್ಲಿ ನಾವಿಬ್ಬರು ಇದ್ದರೆ ಕಳೆ ಬರ್ತದೆ…ಎಂದು ರಚಿತಾ ಕವನ ಬರೆದಿದ್ದಾರೆ…