ನಟ ಯಶಸ್ ಸೂರ್ಯ ಅಭಿನಯದ ಗರಡಿ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ…ಯಶಸ್ ಸೂರ್ಯ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಸಿನಿಮಾವನ್ನ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ… ಚಿತ್ರಕ್ಕೆ ಬಿ ಸಿ ಪಾಟೀಲ್ ಬಂಡವಾಳ ಹಾಕುತ್ತಿದ್ದಾರೆ… ಈಗಾಗಲೇ ಬಿಸಿ ಪಾಟೀಲ್ ಹುಟ್ಟುಹಬ್ಬದಂದು ಸಿನಿಮಾದ ಮುಹೂರ್ತ ಮಾಡಿ ಮುಗಿಸಿದೆ ಚಿತ್ರತಂಡ…
ಇನ್ನು ಗರಡಿ ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಬಂದಿದ್ದು, ಚಿತ್ರಕ್ಕೆ ನಟಿ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ….ಈಗಾಗಲೇ ತಿಳಿದಿರುವಂತೆ ಚಿತ್ರದಲ್ಲಿ ದರ್ಶನ್ ಕೂಡ ಸ್ಪೆಷಲ್ ಅಪೀರಿಯೆನ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಒಟ್ಟಾರೆ ಗರಡಿ ಸಿನಿಮಾ ಬಿಗ್ ಬಜೆಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಮೂಡಿ ಬರೋದು ಕನ್ಫರ್ಮ್ ಆಗಿದೆ …