ನಟಿ ರಚಿತಾ ರಾಮ್ ಆಂಜನೇಯನ ಭಕ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ… ಅದಷ್ಟೇ ಅಲ್ಲದೆ ರಚಿತಾ ಚಿತ್ರೀಕರಣ ಬಿಡುವಿದ್ದಾಗ ಆಗಾಗ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ..
ಕೆಲವು ದಿನಗಳ ಹಿಂದೆಯಷ್ಟೇ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದರು ರಚಿತಾ ರಾಮ್ …ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು …ಈಗ ಬೆಂಗಳೂರಿನ ಹನುಮಂತನಗರದಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ರಚಿತಾ…ವಿಶೇಷ ಅಂದ್ರೆ ರಚಿತಾ ಯಾರಿಗೂ ತಿಳಿಯಬಾರದು ಎಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರ ಮಧ್ಯೆಯೇ ದೇವರ ದರ್ಶನ ಮಾಡಿದ್ದಾರೆ ..ನಂತರ ಆ ಫೋಟೋ ವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ…