‘ಮಾನ್ಸೂನ್ ರಾಗ’ ಚಿತ್ರದ ರಾಗಸುಧಾ ಥೀಮ್ ವಿಡಿಯೋ ಮಿಲಿಯನ್ ವೀಕ್ಷಣೆಯನ್ನು ಕಂಡಿದೆ. ಈ ಸಂಭ್ರಮಕ್ಕೆ ಚಿತ್ರತಂಡ ರಾಗ ಸುಧಾ ಮೇಕಿಂಗ್ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆಯ ಈ ಹಾಡಲ್ಲಿ ಬೈರಾಗಿ ಖ್ಯಾತಿಯ ಯಶಾ ಹಾಕಿರೋ ಸ್ಟೆಪ್ಸ್ ಈಗ ಸಖತ್ ಟ್ರೆಂಡಿಗಲ್ಲಿದೆ. ಜತೆಗೆ ಈ ಹಾಡಿನ ಕವರ್ ವರ್ಶನ್ಸ್ ಬರ್ತಿದ್ದು, ಹಾಡಿನಷ್ಟೇ ಕವರ್ ವರ್ಶನ್ಸ್ ಕೂಡ ಸದ್ದು ಮಾಡುತ್ತಿದೆ.
ವಿಖ್ಯಾತ್ ಅವರ ನಿರ್ಮಾಣ , ಪುಷ್ಪಕ ವಿಮಾನ ರವೀಂದ್ರನಾಥ್ ಅವರ ನಿರ್ದೇಶನ, ಡಾಲಿ ಧನಂಜಯ, ರಚಿತಾ ರಾಮ್ ಮುಖ್ಯಭೂಮಿಕೆಯ ಈ ಚಿತ್ರ ಈಗಾಗ್ಲೇ ಟೀಸರ್ ನಿಂದ ಕುತೂಹಲವನ್ನು ಹುಟ್ಟಿಸಿತ್ತು.
ಆಗಸ್ಟ್17ಕ್ಕೆ ತೆರೆ ಕಾಣಲು ಸಜ್ಜಾಗಿರುವ ಮಾನ್ಸೂನ್ ರಾಗ ರಾಜ್ಯದಾದ್ಯಂತ ಸುಮಾರು 100ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಟೌಟ್ಸ್ ಹಾಕಿ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ.
‘ರಚಿತಾ ರಾಮ್ ಅವರು ಕೂಡ ಇಲ್ಲಿಯವರೆಗೆ ಇಲ್ಲಿಯವರೆಗೆ ನಟಿಸದಂತಹ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ರಚಿತರಾಮ್ ಅವರ ನಟನೆಯ ಕುರಿತಂತೆ ಮಾತನಾಡಿದ ಚಿತ್ರತಂಡ ”ಬಹಳ ಟಫ್ ರೋಲ್ ಇದಾಗಿದೆ. ನಟನೆಯನ್ನು ಬೇಡುತ್ತೆ. ಪಾತ್ರದ ವಿನ್ಯಾಸವೇ ಬೇರೆ ರೀತಿ ಇದೆ. ರಚಿತಾ ಚಾಲೆಂಜಿಂಗ್ ಆಗಿ ತಗೊಂಡು ನಟಿಸಿದ್ದಾರೆ’ ಎನ್ನುತ್ತದೆ.
ಮಾನ್ಸೂನ್ ರಾಗ ಸಿನಿಮಾದ ಲೇಟೇಸ್ಟ್ ಅಪ್ ಡೇಟ್ ಪ್ರಕಾರ, ಪದವಿ ಪೂರ್ವ ನಟಿ ಯಶ ಶಿವಕುಮಾರ್ ಚಿತ್ರತಂಡ ಸೇರಿದ್ದಾರೆ. ಮಾನ್ಸೂನ್ ರಾಗದ ಹೊರತಾಗಿ, ಯಶ ತನ್ನ ಕನ್ನಡದ ಚೊಚ್ಚಲ ಚಿತ್ರವಾದ ‘ಪದವಿ ಪೂರ್ವ’ದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಬೈರಾಗಿ, ರಾಜ್ ಸೌಂಡ್ಸ್ ಮತ್ತು ಲೈಟ್ಸ್, ವಸಿಷ್ಠ ಸಿಂಹ ಅವರ ‘ದಂತಕಥೆ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಮಾನ್ಸೂನ್ ರಾಗದಲ್ಲಿ, ಯಶ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಯಶ ಅವರ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ಚಿತ್ರದ ಫರ್ಸ್ಟ್ ಲುಕ್ ಬಹಿರಂಗಪಡಿಸಲಾಗುತ್ತದೆ. ‘ಮಾನ್ಸೂನ್ ರಾಗ’ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದೆ. ಆ ಪಾತ್ರದ ಪರಿಚಯಕ್ಕೆ ಮ್ಯೂಸಿಕಲ್ ವಿಡಿಯೊ ಒಂದನ್ನು ಮಾಡಿ ರಿಲೀಸ್ ಮಾಡಲಾಗಿತ್ತು.
ಈ ಮ್ಯೂಸಿಕಲ್ ವಿಡಿಯೋದಲ್ಲಿ ಯಶಾ ಅವರ ಡ್ಯಾನ್ಸ್, ಸಿನಿಮಾಟೊಗ್ರಫಿ, ಅನೂಪ್ ಸೀಳಿನ್ ಅವರ ಸಂಗೀತ ಎಲ್ಲರ ಗಮನ ಸೆಳೆಯುತ್ತಿದೆ. ಚೆಂಡೆ ಮತ್ತು ವಯಲಿನ್ ಜುಗಲ್ಬಂದಿಯನ್ನು ಅನೂಪ್ ಈ ಹಾಡಿನಲ್ಲಿ ಬಳಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.