ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಟ್ರೇಲರ್ ಬಿಡುಗಡೆಗೆ ಸಕಲ ಸಿದ್ದತೆ ನಡೆದಿದೆ… ಆರ್ ಆರ್ ಆರ್ ಸಿನಿಮಾ ಟ್ರೇಲರ್ ಡಿಸೆಂಬರ್ _9ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ..
ಸಾಮಾನ್ಯವಾಗಿ ಸಿನಿಮಾ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುತ್ತೆ.. ಇಲ್ಲವಾದಲ್ಲಿ ಪ್ರೇಸ್ ಮೀಟ್ ಮಾಡಿ ರಿಲೀಸ್ ಮಾಡಲಾಗುತ್ತೆ.. ಆದರೆ ಇದೇ ಮೊಟ್ಟ ಮೊದಲಬಾರಿಗೆ ಚಿತ್ರದ ಟ್ರೇಲರ್ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಲಿದೆ…
ಒಂದಲ್ಲ ಎರಡಲ್ಲ ಒಟ್ಟು ರಾಜ್ಯದ 30ಥಿಯೇಟರ್ ನಲ್ಲಿ ಆರ್ ಆರ್ ಆರ್ ಟ್ರೇಲರ್ ರಿಲೀಸ್ ಆಗ್ತಿದೆ ..ಹೌದು ನಾಳೆ ಆರ್ ಆರ್ ಆರ್ ಸಿನಿಮಾ ಟ್ರೇಲರ್ ಬಿಡುಗಡೆಗೆ ಸಖಲ ಸಿದ್ದತರ ನಡೆದಿದೆ…
ಮೇಕಿಂಗ್ ಹಾಗೂ ಸಾಂಗ್ಸ್ ಹೀಗೆ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟುಹಾಕಿರೋ RRR ಸಿನಿಮಾದ ಟ್ರೇಲರ್ ಯೂಟ್ಯೂಬ್ ಗೂ ಮೊದಲೇ ಥಿಯೇಟರ್ ಅಂಗಳದಲ್ಲಿ ಸೌಂಡ್ ಮಾಡಲಿದೆ..
RRR ಸಿನಿಮಾದ ವಿತರಣೆ ಹಕ್ಕು ಪಡೆದಿರುವ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ KVN, ರಾಜ್ಯದ 30 ಥಿಯೇಟರ್ ಗಳಲ್ಲಿ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆ ಮಾಡುತ್ತಿದೆ.
RRR ಸಿನಿಮಾದಲ್ಲಿ ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಕನ್ನಡ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ತ್ರಿಬಲ್ ಆರ್ ಸಿನಿಮಾವನ್ನು ರಾಜ್ಯಾದ್ಯಂತ ಪ್ರೇಕ್ಷಕರಿಗೆ ಅರ್ಪಿಸಲಿದೆ. ಜನವರಿ 7ರಂದು ಪಂಚ ಭಾಷೆಯಲ್ಲಿ RRR ಸಿನಿಮಾ ಬೆಳ್ಳಿಪರದೆಗೆ ಲಗ್ಗೆ ಇಡಲಿದೆ.