Karnataka Bhagya

ರಕ್ಷಿತ್ ಶೆಟ್ಟಿ ಕಡೆಯಿಂದ ಗೌರಿ-ಗಣೇಶ ಹಬ್ಬಕ್ಕೆ ಸಿಕ್ತಿದೆ ಭರ್ಜರಿ ಗಿಫ್ಟ್

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಕ್ಷಿತ್, ಬಹುನಿರೀಕ್ಷೆಯ 777 ಚಾರ್ಲಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ 777 ಚಾರ್ಲಿ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಚಾರ್ಲಿತಂಡ ಗೌರಿ-ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಗಿಫ್ಟ್ ಕೊಡಲು ಮುಂದಾಗಿದೆ. ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿನಿಮಾತಂಡ ಸಿದ್ಧವಾಗಿದೆ. ಚಿತ್ರದಿಂದ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡುವುದಾಗಿ ಸಿನಿಮಾ ತಂಡ ಘೋಷಣೆ ಮಾಡಿದೆ.

777ಚಾರ್ಲಿ ಸಿನಿಮಾದ ಮೊದಲ ವಿಡಿಯೋ ಹಾಡು ‘ಟಾರ್ಚರ್’ ಸಾಂಗ್ ಸೆಪ್ಟಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಗೌರಿ-ಗಣೇಶ ಹಬ್ಬಕ್ಕೂ ಮುಂಚಿತವಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡುತ್ತಿದೆ ತಂಡ. ಅಂದಹಾಗೆ ಈ ಹಾಡು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ.

ಈಗಾಗಲೇ ಬಿಡುಗಡೆಯಾಗಿರುವ ಮೊದಲ ಟೀಸರ್ ಸಹ ಕನ್ನಡದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಹಾಗೂ ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಟೀಸರ್‌ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮೊದಲ ಹಾಡು ಎಲ್ಲಾ ಭಾಷೆಯಲ್ಲೂ ಬರ್ತಿರುವುದು ಕುತೂಹಲ ಹೆಚ್ಚಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುನ ರಕ್ಷಿತ್ ಶೆಟ್ಟಿ, “ನಮ್ಮ 777ಚಾರ್ಲಿ ಚಿತ್ರದ ಮೊದಲ ವಿಡಿಯೋ ಸಾಂಗ್ ಇದೇ ಸೆಪ್ಟೆಂಬರ್ 9ರಂದು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರೆ. ಅಂದಹಾಗೆ 777 ಚಾರ್ಲಿ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ನೋಬಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಾರ್ಲಿ ಸಿನಿಮಾದಲ್ಲಿ ಮನುಷ್ಯ ಮತ್ತು ನಾಯಿಯ ಜೊತೆಗಿನ ಭಾವುಕ, ಪ್ರೀತಿಯ ಪಯಣದ ಕಥೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಚಿತ್ರದಲ್ಲಿ ರಕ್ಷಿತ್ ಹೆಸರು ಧರ್ಮ ಮತ್ತು ನಾಯಿಯ ಹೆಸರು ಚಾರ್ಲಿ. ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ನಟಿಸಿದ್ದಾರೆ.

ಸದ್ಯ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಟೀಸರ್, ಹಾಡುಗಳನ್ನು ಬಿಡುಗಡೆ ಮೂಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಮಾಹಿತಿ ಇನ್ನು ರಿವೀಲ್ ಮಾಡಿಲ್ಲ. ಸದ್ಯ ಕೊರೊನಾ 3ನೇ ಅಲೆಯ ಆತಂಕ, ಚಿತ್ರಮಂದಿರಗಳಲ್ಲಿ ಇನ್ನೂ ಶೇ. 50 ರಷ್ಟು ಭರ್ತಿಗೆ ಮಾತ್ರ ಇರುವ ಕಾರಣ ಸಿನಿಮಾತಂಡ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಎಲ್ಲಾ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

ಇನ್ನು ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ ರಕ್ಷಿತ್ ಸದ್ಯ 777 ಚಾರ್ಲಿ ಬಿಡುಗಡೆ ಜೊತೆಗೆ, ಸಪ್ತಸಾಗರದಾಚೆ ಎಲ್ಲೋ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರಕ್ಕೆ ಹೇಮಂತ್ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾ ಬಳಿಕ ಪುಣ್ಯಕೋಟಿ ಸಿನಿಮಾ ಕೂಡ ರಕ್ಷಿತ್ ಕೈಯಲ್ಲಿದೆ. ಇತ್ತೀಚಿಗಷ್ಟೆ ‘ರಿಚರ್ಡ್’ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ರಿಚರ್ಡ್ ಸಿನಿಮಾ ನಿರ್ದೇಶನದ ಮೂಲಕ ರಕ್ಷಿತ್ 7 ವರ್ಷಗಳ ಬಳಿಕ ಮತ್ತೆ ನಿರ್ದೇಶನದ ಕಡೆ ಮುಖ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ ಅಥವಾ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಕಿರಿಕ್ ಪಾರ್ಟಿ-2 ಸಿನಿಮಾ ಕೂಡ ಮಾಡುವುದಾಗಿ ಹೇಳಿದ್ದಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap