Karnataka Bhagya
Blogಇತರೆ

ರಕ್ಷಿತ್ ಕೊಟ್ಟರು ವಿಶೇಷ ಸುಳಿವು.

ರಿಷಬ್ ಶೆಟ್ಟಿ ಅವರು ಚಂದನವನದ ಅತಿ ಚಾಲಾಕಿ, ಹಾಗು ಭಾರವಸೆಯುಳ್ಳ ಯುವ ನಿರ್ದೇಶಕರಲ್ಲಿ ಒಬ್ಬರು. ಕಿರಿಕ್ ಪಾರ್ಟಿ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಹೀಗೆ ಹಲವು ಅದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ಇವರದ್ದು. ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ಜುಲೈ 7ರಂದು ತಮ್ಮ ಜನ್ಮದಿನ ಆಚರಿಸಿಕೊಂಡರು. ಈ ಸಂಧರ್ಭದಲ್ಲಿ ಇವರ ಮುಂದಿನ ಸಿನಿಮಾಗಳಿಂದ ಪೋಸ್ಟರ್ ಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದವು. ಇದೆಲ್ಲದರ ನಡುವೆ ಎದ್ದು ನಿಂತಿದ್ದು ರಕ್ಷಿತ್ ಶೆಟ್ಟಿಯವರ ‘ಪರಮ್ ವಾಹ್ ಸ್ಟುಡಿಯೋಸ್’ ನಿಂದ ಹೊರಬಿದ್ದ ಒಂದು ವಿಶೇಷ ಪೋಸ್ಟರ್.

ರಕ್ಷಿತ್ ಶೆಟ್ಟು ಹಾಗು ರಿಷಬ್ ಶೆಟ್ಟಿ ಇಬ್ಬರು ಅತೀ ಆಪ್ತ ಗೆಳೆಯರು. ಚಿತ್ರರಂಗದ ಪಯಣದ ಶುರುವಿನಲ್ಲಿ ಭೇಟಿಯಾಗಿ, ಚಿತ್ರರಂಗದಲ್ಲಿ ತಮ್ಮ ಯಶಸ್ಸುಗಳನ್ನೂ ಜೊತೆಯಾಗಿಯೇ ಕಂಡವರು. ರಕ್ಷಿತ್ ಶೆಟ್ಟಿ ಅವರು ರಿಷಬ್ ಅವರ ಜನ್ಮದಿನಕ್ಕೆ ಶುಭಾಶಯ ಕೋರುತ್ತಾ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ‘Happy Birthday Rishabh’ ಜೊತೆಗೆ ಒಂದು ಟಿಕೆಟ್ ರೀತಿಯ ಒನ್ ಬೋರ್ಡಿಂಗ್ ಪಾಸ್ ಒಂದನ್ನು ತೋರಿಸಿದ್ದಾರೆ. ಅಲ್ಲದೇ ರಿಷಬ್ ಹೆಸರಿನಡಿಯಲ್ಲಿ ನೆರಳಿನಲ್ಲಿ ‘ಮ್ಯಾಡ್ಡಿ’ ಎಂದು ಬರೆಯಲಾಗಿದೆ. ಟಿಕೆಟ್ ನಲ್ಲಿ ‘BLR TO BKK’ ಎಂದು ಬರೆದಿದ್ದು, ಪ್ರಯಾಣಿಕರು ರಿಷಬ್ ಶೆಟ್ಟಿ, ಸೀಟ್, ದಿಗಂತ್ ಪಕ್ಕ ಎಂದು ಬರೆಯಲಾಗಿದೆ.

ಇದೆಲ್ಲವನ್ನು ನೋಡಿದರೆ ಎಲ್ಲರಿಗೂ ಗೊತ್ತಾಗುವುದು, ರಕ್ಷಿತ್ ಹಾಗು ರಿಷಬ್ ಮರಳಿ ಜೋಡಿಯಾಗಿ ಸಿನಿಮಾ ಮಾಡುತ್ತಾರೆ ಎಂದು. ಆದರೆ ಆ ಚಿತ್ರ ಯಾವುದು? ಅದಕ್ಕೆ ಉತ್ತರ ರಕ್ಷಿತ್ ಬರೆದಿರುವ ಕ್ಯಾಪ್ಶನ್ ಹಾಗು ಟಿಕೆಟ್ ನಲ್ಲಿರುವ ಕ್ಯೂ ಆರ್ ಕೋಡ್ ನಲ್ಲಿದೆ. ಟಿಕೆಟ್ ಪಕ್ಕದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ‘Coming Soon!The next biggest PARTY in the town’ ಎಂಬ ಚಿತ್ರ ಕಾಣಿಸುತ್ತಿದೆ. ‘ನಗರದ ಮುಂದಿನ ಅತೀ ದೊಡ್ಡ ಪಾರ್ಟಿ ಶೀಘ್ರದಲ್ಲೇ ಬರಲಿದೆ’ ಎಂಬರ್ತದ ಪೋಸ್ಟರ್. ರಕ್ಷಿತ್ ಅವರು ಕೂಡ ‘ನಿನ್ನ ಜೊತೆ ‘ಪಾರ್ಟಿ’ ಆರಂಭಿಸಲು ಕಾಯುತ್ತಿದ್ದೇನೆ ಗೆಳೆಯ’ ಎಂದು ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದಾರೆ. ಯಾವ ಪಾರ್ಟಿ? ಉತ್ತರ ರಕ್ಷಿತ್ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಕಿರಿಕ್ ಪಾರ್ಟಿ 2’.

2016ರಲ್ಲಿ ಬಿಡುಗಡೆಯಾಗಿದ್ದ ಬ್ಲಾಕ್ ಬಸ್ಟರ್ ಚಿತ್ರ ‘ಕಿರಿಕ್ ಪಾರ್ಟಿ’ಯಲ್ಲಿ ರಕ್ಷಿತ್ ನಾಯಕರಾದರೆ, ರಿಷಬ್ ನಿರ್ದೇಶಕರು. ರಕ್ಷಿತ್ ಜೊತೆಗೆ, ರಶ್ಮಿಕಾ ಮಂದಣ್ಣ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸಂಯುಕ್ತ ಹೆಗ್ಡೆ ಮುಂತಾದವರು ನಟಿಸಿದ್ದ ಈ ಸಿನಿಮಾ ಯುವಜನತೆಯ ಮನಸೆಳೆದು ಭರ್ಜರಿ ಯಶಸ್ಸು ಪಡೆದಿತ್ತು. ಇತ್ತೀಚಿಗಷ್ಟೇ ರಕ್ಷಿತ್ ಅದೇ ತಂಡದ ಜೊತೆಗೆ ‘ಕಿರಿಕ್ ಪಾರ್ಟಿ 2’ ಮಾಡುವುದಾಗಿ ಘೋಷಣೆ ಮಾಡಿದ್ದರು. ಹಾಗಾಗಿ ಈ ಪೋಸ್ಟರ್ ನ ಎಲ್ಲ ಸುಳಿವುಗಳು ಅದಕ್ಕೇ ಸುತ್ತಿಕೊಳ್ಳುತ್ತಿವೆ. ಹಾಗಾದರೆ ಈ ಬಾರಿ ನಿರ್ದೇಶನದ ಜೊತೆಗೆ ‘ಕಿರಿಕ್ ಪಾರ್ಟಿ 2’ನಲ್ಲಿ ರಿಷಬ್ ನಟಿಸುತ್ತಾರ!! ನಟಿಸಿದರೆ ಆ ಪಾತ್ರದ ಹೆಸರು ‘ಮ್ಯಾಡ್ಡಿ’ ಆಗಿರಲಿದೆ. ಜೊತೆಗೆ ‘ದಿಗಂತ್ ಪಕ್ಕ’ ಎಂದು ಬರೆದುಕೊಂಡಿರುವುದರಿಂದ ಪ್ರಾಯಶಃ ದಿಗಂತ್ ಅವರು ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಬಹುದು.

ಸದ್ಯ ರಿಷಬ್ ಶೆಟ್ಟಿ ಅವರ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ಅಲ್ಲದೇ ‘ಬೆಲ್ ಬಾಟಮ್ 2’ ಕೂಡ ಘೋಷಣೆಯಾಗಿದೆ. ಇದರ ನಡುವೆ ಸಿಕ್ಕಿರುವ ‘ಕಿರಿಕ್ ಪಾರ್ಟಿ 2’ ಬಗೆಗಿನ ವಿಷಯ ಕನ್ನಡ ಸಿನಿರಸಿಕರಲ್ಲಿ ಸಂತಸ ತರುವುದಂತೂ ಖಂಡಿತ.

Related posts

ಯಶ್ ಬಳಿ ಕಬ್ಬಿನಹಾಲು ಕೊಡಿಸುವ ಸಮಯ ಎಂದ ಕೃತಿ ಕರಬಂಧ..‌ ಯಾಕೆ ಗೊತ್ತಾ?

Nikita Agrawal

ನಾನು ಸೈಕೋ ಎಂದ ರಶ್ಮಿಕಾ ಮಂದಣ್ಣ !

Nikita Agrawal

ಮೆಂಟಲಿ ಚಾಲೆಂಜ್ಡ್ ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಜಯ್ ಡಿಸೋಜಾ

Nikita Agrawal

Leave a Comment

Share via
Copy link
Powered by Social Snap