Karnataka Bhagya
Blogಕರ್ನಾಟಕ

‘ವೀರಲೋಕ’ ಎಂಬ ಪುಸ್ತಕಪ್ರಪಂಚ; ರಮೇಶ್ ಅರವಿಂದ್, ಸುದೀಪ್ ಸಾಥ್.

ನಮ್ಮ ದೇಶ, ನಮ್ಮ ಜನರು ಭಾಷೆಯ ಭೇದಭಾವವಿಲ್ಲದೆ ಬೆಳೆಯುತ್ತಿದ್ದೇವೆ. ಆದರೂ ಅಲ್ಲಲ್ಲಿ ಕೆಲ ಸಂಧರ್ಭಗಳಲ್ಲಿ ಭಾಷೆಗಳ ಭೇಧಭಾವ ಕಂಡೇ ಕಾಣುತ್ತಿದೆ. ಅದು ಸಿನಿಮಾದಲ್ಲಾಗಲಿ ಸಾಹಿತ್ಯದಲ್ಲಾಗಲಿ. ಈಗಂತೂ ಕನ್ನಡಿಗರೇ ಕನ್ನಡ ಸಾಹಿತ್ಯವನ್ನು, ಪುಸ್ತಕಗಳನ್ನು ಅನುಭವಿಸುತ್ತಿಲ್ಲ, ಗೌರವುಸುತ್ತಿಲ್ಲ ಎಂಬ ದೂರುಗಳನ್ನು ಸ್ವತಃ ಕನ್ನಡಿಗರೇ ನೀಡುತ್ತಿದ್ದೇವೆ.ಈಗ ಎಲ್ಲೆಡೆ ಓದುಗರು ಕಡಿಮೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳಿಗೆ ಹೊಸ ಮಾರುಕಟ್ಟೆಯನ್ನೇ ಸೃಷ್ಟಿ ಮಾಡಿ, ಕನ್ನಡ ಸಾಹಿತ್ಯದ ಪ್ರಾಮುಖ್ಯತೆಯನ್ನು, ವೈಭವವನ್ನೂ ಎಲ್ಲೆಡೆ ಪರಿಚಯಿಸುವುದಕ್ಕೆ ಹೊಸ ಪ್ರಯತ್ನವೊಂದು ಆರಂಭವಾಗಿದೆ. ಅದುವೇ ‘ವೀರಲೋಕ’. ಈ ಬೆಳವಣಿಗೆಗೆ ಕನ್ನಡ ಸಿನಿರಂಗದಿಂದಲೂ ಸಾಥ್ ಸಿಗುತ್ತಿದೆ.

ಈ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿರುವವರು ಕನ್ನಡ ನಾಡಿನ ‘ಯಜಮಾನ’ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿರುವ ವೀರಕಪುತ್ರ ಶ್ರೀನಿವಾಸ್ ಎಂಬುವವರು. ರಾಜ್ಯದ ಪ್ರಮುಖ ಆಸ್ಪತ್ರೆಗಳು, ಕಛೇರಿಗಳು, ಮಾಲ್ ಗಳು ಮುಂತಾದ ದೊಡ್ಡ ದೊಡ್ಡ ಸಾಮಾಜಿಕ ಕ್ಷೇತ್ರಗಳಲ್ಲಿ ಕನ್ನಡ ಪುಸ್ತಕಗಳ ಪುಟ್ಟ ಮಳಿಗೆಯನ್ನು ತೆರೆಯಲಾಗುತ್ತದೆ. ಅಲ್ಲೇ ನೋಡಿ, ಅಲ್ಲೇ ಖರೀದಿ ಮಾಡುವ ಅವಕಾಶವನ್ನು ನೀಡಲಾಗುತ್ತದೆಯಂತೆ. ಈಗಾಗಲೇ ‘ವೀರಲೋಕ’ದಿಂದ ಪ್ರಸಿದ್ಧ ಲೇಖಕರ ಹತ್ತು ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಕನ್ನಡದ ಪ್ರಖ್ಯಾತ ನಟರಾದ ರಮೇಶ್ ಅರವಿಂದ್ ಅವರು ಬರೆದಿರುವ ‘ಆರ್ಟ್ ಒಫ್ ಸಕ್ಸಸ್’ ಪುಸ್ತಕವೂ ಕೂಡ ಸೇರಿದೆ. ಅಂದಹಾಗೆ ರಮೇಶ್ ಅರವಿಂದ್ ಅವರು ಈ ಅಭಿಯಾನದ ರಾಯಭರಿಯಾಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ‘ಪುಸ್ತಕ ಓದು’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಯಭಾರಿಯಾದ ರಮೇಶ್ ಅರವಿಂದ್ ಹಾಗು ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ ಅವರು ಉಪಸ್ಥಿತರಿದ್ದರು. ಪ್ರತೀ ಪುಸ್ತಕಗಳ ಪರಿಚಯಕ್ಕೆ ವಿಡಿಯೋ ಒಂದನ್ನು ಪ್ರದರ್ಶಿಸಿ ಆಯಾ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಪುಸ್ತಕಗಳನನ್ನು ಬಿಡುಗಡೆ ಮಾಡುವಲ್ಲಿ ಕೈಜೋಡಿಸಿದ ರಮೇಶ್ ಹಾಗು ಸುದೀಪ್ ಅವರು ಅಭಿಯಾನದ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Related posts

ಸರಿಗಮಪ ವೇದಿಕೆಯಲ್ಲಿ ಪ್ರೇಮ್ ರಕ್ಷಿತಾ ಮ್ಯಾಜಿಕ್

Nikita Agrawal

ಮಲೈಕಾ‌ ಅರೋರಾ ಹ್ಯಾಪಿ ಬರ್ತಡೆ ಮೈ ಸನ್ ಶೈನ್ ಅಂದದ್ದು ಯಾರಿಗೆ..! ಡಿವೋರ್ಸ್ ಬಳಿಕ ಮಲೈಕಾ ಜೊತೆ ಇರುವ ನಟ ಯಾರು..?

kartik

ಸೆನ್ಸಾರ್ ಮಂಡಳಿಯಿಂದ ಮದಗಜ ಸಿನಿಮಾಗೆ ಅಸ್ತು

Karnatakabhagya

Leave a Comment

Share via
Copy link
Powered by Social Snap