Karnataka Bhagya

ಹೊಸ ಲುಕ್ ನಲ್ಲಿ ಮೋಡಿ ಮಾಡಲಿದ್ದಾರೆ ರಂಗಿತರಂಗ ನಟಿ

ಚೇಸ್ ಸಿನಿಮಾ ಮುಖಾಂತರ ಎರಡು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ರಾಧಿಕಾ ಚೇತನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ ಹಾಗೂ ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಜುಲೈ 15ರಂದು ಬಿಡುಗಡೆಯಾಗಿದೆ

ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಧಿಕಾ ನಾರಾಯಣ್
”ತರಬೇತಿಯ ಅವಧಿಯಲ್ಲಿರುವ ಒಂದು ಪೋಲಿಸ್ ನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಪೊಲೀಸ್ ಡಿಪಾರ್ಟ್ಮೆಂಟ್ ಗೆ ಸೇರಬೇಕೆನ್ನುವ ಆಸೆ ಇದ್ದರೂ ಕಥೆಯ ತಿರುವು ಯಾವುದೋ ಅರಿಯದ ಊರಿನಡೆಗೆ ಪ್ರಯಾಣ ಬೆಳೆಸುವಂತೆ ಮಾಡುತ್ತದೆ” ಎಂದರು.



ಚಿತ್ರದಲ್ಲಿ ನಾಯಿಯೊಂದಿಗೆ ಅಭಿನಯಿಸಿದ ದೃಶ್ಯದ ಕುರಿತು ತಮ್ಮ ಅನುಭವವನ್ನು ಹೇಳಿದ ಅವರು” ಬ್ರೂನೋ ಎಂಬ ಲ್ಯಾಬ್ರೊಡಾರ್ ಶ್ವಾನದೊಂದಿಗೆ ಬಾಂಧವ್ಯ ಬೆಳೆಸುವ ಸವಾಲು ನನಗಿತ್ತು. ನಾನು ಅದರೊಂದಿಗೆ ಸಮಯವನ್ನು ಕಳೆಯುವುದರೊಂದಿಗೆ ಅದನ್ನು ವಾಕಿಂಗಿಗೆ ಕರೆದುಕೊಂಡು ಹೋಗುತ್ತಿದ್ದೆ. ಒಂದು ದೃಶ್ಯದಲ್ಲಿ ಬ್ರೂನೋ ನನ್ನ ಮುಖವನ್ನು ನೆಕ್ಕಬೇಕಿತ್ತು. ಅವನ ಚಿತ್ತವನ್ನು ಸೆಳೆಯಲು ಕಿವಿಯ ಹಿಂಭಾಗದಲ್ಲಿ ತಿಂಡಿಯನ್ನಿರಿಸಿ ಚಿತ್ರೀಕರಣ ಮಾಡಲಾಯಿತು. ಮೊದಲ ಬಾರಿ ನಾಯಿಯೊಂದಿಗೆ ಅಭಿನಯಿಸಿದ ಅನುಭವ ತುಂಬಾ ಚೆನ್ನಾಗಿತ್ತು” ಎಂದರು.

ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಚೇಸ್ ಸಿನಿಮಾಗಾಗಿ ರಾಧಿಕಾ ಸ್ಟಂಟ್ ನ್ನೂ ಮಾಡಿದ್ದಾರೆ. ಇದರ ಬಗ್ಗೆ ಮಾತನಾಡಿದ ಅವರು” ಇದಕ್ಕಾಗಿ ನಾನು ಒಂದು ವಾರಗಳ ಕಾಲ ಕ್ರವಾ ಮಗಾ ತರಬೇತಿಯನ್ನು ಕೂಡ ಪಡೆದುಕೊಂಡೆ. ದೈಹಿಕವಾಗಿ ತರಬೇತಿಯ ಸಮಯ ತುಂಬಾ ಕಠಿಣವಾಗಿತ್ತು. ಚೇತನ್ ಡಿಸೋಜಾ ಅವರು ಸಂಯೋಜಿಸಿದ ಸಾಹಸ ದೃಶ್ಯಗಳು ಅನನ್ಯವಾಗಿದೆ. ಪಾತ್ರದ ಸಾಮರ್ಥ್ಯವನ್ನು ಮೀರಿದ ದೃಶ್ಯಾವಳಿಗಳು ಇಲ್ಲದಿರುವುದರಿಂದ ಇವು ನೋಡುಗರನ್ನು ರೋಮಾಂಚಿತಗೊಳಿಸುತ್ತವೆ” ಎಂದರು.

ಇದಲ್ಲದೆ ರಾಧಿಕಾ ಹಿಂದಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ”ವಿಷಯವು ಬದಲಾವಣೆಯ ಮೂಲಕ ಸಾಗುತ್ತಿದೆ. ಹಲವಾರು ಅವಕಾಶಗಳು ಒದಗಿ ಬರುತ್ತಿವೆ. ವೆಬ್ ಸೀರೀಸ್ ನಲ್ಲಿ ನಟಿಸಲು ಸ್ವಲ್ಪ ಸೂಕ್ಷ್ಮತೆಯ ಅಗತ್ಯವಿರುತ್ತದೆ. ವೃತ್ತಿಪರ ನಟಿಯಾಗಿ ನನಗೆ ತೃಪ್ತಿ ನೀಡುವಂತಹ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ” ಎನ್ನುವ ಅವರು ಚಿತ್ರಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಾ ”ನಾನು ಕೇವಲ ಸಂಖ್ಯೆಯ ಸಲುವಾಗಿ ಚಿತ್ರಗಳಿಗೆ ಸಹಿ ಮಾಡಲು ಇಷ್ಟಪಡುವುದಿಲ್ಲ. ನಾನು ನನ್ನೊಂದಿಗೆ ಮಾತನಾಡುವಂತಹ ಸಿನಿಮಾಗಳನ್ನು ಮಾಡಿದ್ದೇನೆ; ಮತ್ತು ನಾನು ಪಾತ್ರಗಳನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತವಾಗಿ ಹೇಳುತ್ತೇನೆ. ಏಕೆಂದರೆ ನನ್ನನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಜನರು ಬರುತ್ತಾರೆ. ನಾನು ಅವರನ್ನು ನಿರಾಶೆಗೊಳಿಸಲು ಇಷ್ಟಪಡುವುದಿಲ್ಲ” ಎನ್ನುತ್ತಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap