ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ…ಈ ಜೋಡಿ ಸಿನಿಮಾದಲ್ಲಿ ಒಟ್ಟಿಗೆ ಅಭಿನಯ ಮಾಡಿ ಸುದ್ದಿ ಮಾಡಿದ್ರ ಜೊತೆಗೆ ಇಬ್ಬರ ಮಧ್ಯೆ ಬೇರೇನೋ ನಡೆಯುತ್ತಿದೆ ಎಂದು ಟಾಕ್ ಆಗಿತ್ತು…ಈಗ ಮತ್ತದೆ ವಿಚಾರಕ್ಕೆ ರಶ್ಮಿಕಾ ಹಾಗೂ ವಿಜಯ್ ಸೌಂಡ್ ಮಾಡುತ್ತಿದ್ದಾರೆ…

ಹೊಸ ವರ್ಷಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದೆ…ಕೊರೋನಾ ಮಧ್ಯೆಯೂ ಜನರು ಹಾಗೂ ಸೆಲಬ್ರೆಟಿಗಳು ಹೊಸ ವರ್ಷವನ್ನ ವೆಲ್ಕಂ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ…ಅದರಂತೆಯೇ ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಹೊಸವರ್ಷವನ್ನ ವಿಭಿನ್ನವಾಗಿ ಆಚರಣೆ ಮಾಡಲು ಸಾಗರದ ತೀರಕ್ಕೆ ಹೋಗಿದ್ದಾರೆ…

ಹೌದು ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡಾ ಗೋವಾದಲ್ಲಿ ಈ ವರ್ಷದ ಹೊಸ ವರ್ಷವನ್ನ ಆಚರಣೆ ಮಾಡುತ್ತಿದ್ದಾರೆ…ಈಗಾಗಲೇ ಇಬ್ಬರು ಗೋವಾ ತಲುಪಿದ್ದು ಒಟ್ಟಿಗೆ ನ್ಯೂ ಇಯರ್ ಸೆಲಬ್ರೆಟ್ ಮಾಡಲಿದ್ದಾರೆ…ಇವರಿಬ್ಬರು ಗೋವಾ ಪ್ರವಾಸ ಎಲ್ಲರಲ್ಲಿಯೂ ಇವ್ರ ಮಧ್ಯೆ ಬೇರೆನೋ ಇದೆ ಇಬ್ಬರು ಡೇಟ್ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಸ್ಟಾರ್ಟ್ ಆಗಿದೆ…