ಸ್ಯಾಂಡಲ್ ವುಡ್ ನಲ್ಲಿ ತನ್ನ ಕೆರಿಯರ್ ಆರಂಭಿಸಿ ಸದ್ಯ ಟಾಲಿವುಡ್ ,ಬಾಲಿವುಡ್ ಕಾಲಿವುಡ್, ನಟಿಯಾಗಿ ಮೆರೆಯುತ್ತಿರುವ ಹೀರೋಯಿನ್ ರಶ್ಮಿಕಾ ಮಂದಣ್ಣ… ನಟಿ ರಶ್ಮಿಕಾ ಅಭಿನಯದ ಪುಷ್ಪ ಸಿನಿಮಾ ಇಂದು ತೆರೆಗೆ ಬಂದಿದೆ… ಸಿನಿಮಾದ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳ ರೌಂಡ್ ಹಾಕುತ್ತಿರುವ ರಶ್ಮಿಕಾ ಇತ್ತೀಚೆಗಷ್ಟೇ ಕೇರಳದಲ್ಲಿ ತಮ್ಮ ಪುಷ್ಪ ಸಿನಿಮಾದ ಪ್ರಚಾರವನ್ನು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು…
ಪ್ರಚಾರದಲ್ಲಿ ರಶ್ಮಿಕಾ ಥೇಟ್ ಮಲಯಾಳಿ ಹುಡುಗಿ ಈ ರೀತಿಯಲ್ಲಿ ಕಾಣಿಸಿಕೊಂಡರು …ಅದ್ರಲ್ಲೇನಿದೆ ವಿಶೇಷತೆ ಅಂದ್ರೆ… ರಶ್ಮಿಕಾ ಈ ಹಿಂದೆ ಎಂದಿಗೂ ಕಾಣಿಸಿಕೊಳ್ಳದಷ್ಟು ಗ್ಲಾಮರಸ್ ಲುಕ್ ನಲ್ಲಿ ಕೇರಳ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಎಲ್ಲರ ಗಮನ ಸೆಳೆದರು…
ಇನ್ನು ರಶ್ಮಿಕಾ ಅಭಿನಯದ ಸಿನಿಮಾ ಇಂದು ತೆರೆಗೆ ಬಂದಿದ್ದು, ಚಿತ್ರದಲ್ಲಿ ರಶ್ಮಿಕಾ ಡಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ…ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಲುಕ್ ಕಂಪ್ಲೀಟ್ ಆಗಿ ಬದಲಾಗಿದೆ… ರಶ್ಮಿಕಾ ಸಖತ್ ಸ್ಟೈಲಿಶ್ ಆಗಿದ್ದಾರೆ.. ಒಟ್ಟಾರೆ ಕೇರಳದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ರಶ್ಮಿಕ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ