ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ ವುಡ್ ಸ್ಟಾರ್ ಆಗಿ ಮಾತ್ರವಲ್ಲದೆ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟಿ …ಟಾಲಿವುಡ್,ಕಾಲಿವುಡ್ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ …ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಂತರವಂತೂ ರಶ್ಮಿಕಾ ವರ್ಚಸ್ಸು ಬದಲಾಗಿ ಹೋಗಿದೆ ..
ರಶ್ಮಿಕಾ ಸ್ಟೈಲ್, ಮ್ಯಾನರಿಸಂ, ಔಟ್ ಫಿಟ್ ಪ್ರತಿಯೊಂದು ಕೂಡ ಅಭಿಮಾನಿಗಳನ್ನು ಆಕರ್ಷಣೆ ಮಾಡುತ್ತಿದ್ದು ಅವರ ಫಿಟ್ನೆಸ್ ಹಾಗೂ ಸ್ಟೈಲ್ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿರುತ್ತಾರೆ ..ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಹಾಗೂ ತಮ್ಮ ಫ್ಯಾಮಿಲಿ ಸಿನಿಮಾ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರುತ್ತಾರೆ ರಶ್ಮಿಕಾ…ಈಗ ಅವರ ಬಗ್ಗೆ ಮತ್ತಷ್ಟು ಮಾಹಿತಿ ಕೊಡುವ ಕಾರಣದಿಂದಾಗಿ ತಮ್ಮದೇ ಆದ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ …
ತಮ್ಮ ಯೂಟ್ಯೂಬ್ ಚಾನಲ್ ಆರಂಭ ಮಾಡಿ ಸಣ್ಣದೊಂದು ವಿಡಿಯೋ ಅಪ್ಲೋಡ್ ಮಾಡಿರುವ ರಶ್ಮಿಕಾಗೆ ಈಗಾಗಲೇ ಲಕ್ಷಾಂತರ ಅಭಿಮಾನಿಗಳ ಯೂಟ್ಯೂಬ್ ನಲ್ಲಿ ಪ್ರೀತಿ ತೋರುತ್ತಿದ್ದಾರೆ ..ತಮ್ಮ ಟ್ರಾವೆಲಿಂಗ್, ಸಿನಿಮಾ, ಫಿಟ್ನೆಸ್, ಫುಡ್ ಮೇಲಿರುವ ಪ್ರೀತಿ ಹೀಗೆ ಎಲ್ಲಾ ವಿಚಾರವನ್ನು ರಶ್ಮಿಕಾ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳಲಿದ್ದಾರೆ ..