ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಬೇಕು ಎಂಬುದು ಎಲ್ಲರ ಕನಸು. ಮಾತ್ರವಲ್ಲ ಇದರ ಜೊತೆಗೆ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಹಲವರ ಆಸೆ ಆಗಿರುತ್ತದೆ. ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಈ ವಿಷಯದಲ್ಲಿ ಲಕ್ಕಿ.

ಹೌದು, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಇದೀಗ ಅಮಿತಾಭ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ. ಸಂತಸದ ವಿಚಾರವೆಂದರೆ ಆ ಫೋಟೋವನ್ನು ಸ್ವತಃ ಅಮಿತಾಭ್ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಈಗಾಗಲೇ ಎರಡು ಹಂತಗಳಲ್ಲಿ ಶೂಟಿಂಗ್ ಮುಗಿದಿದ್ದು ಈ ಶೂಟಿಂಗ್ ವೇಳೆಯಲ್ಲಿ ಫೋಟೋ ತೆಗೆದು ಅಮಿತಾಭ್ ಹಂಚಿಕೊಂಡಿದ್ದಾರೆ. ಗುಡ್ ಬೈ ಹೆಸರಿನ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಈ ಚಿತ್ರದಲ್ಲಿ ಅಮಿತಾಭ್ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೇ ರಶ್ಮಿಕಾ ಅವರಿಗೆ ಇದು ಎರಡನೇ ಬಾಲಿವುಡ್ ಸಿನಿಮಾ ಹೌದು.


