ಹೇಳ್ಕೊಳ್ಳೋಕೆ ಒಂದೂರು.. ತಲೆ ಮ್ಯಾಗೆ ಒಂದು ಸೂರು ಮಲಗಾಕೆ ಭೂಮ್ ತಾಯಿ ಮಂಚ.. ಅದು ಆ ರತ್ನನ್ ಪರಪಂಚ.. ಹೆತ್ತೋಳು ಒಂದೂರು.. ಒಡಹುಟ್ದೋರು ಎಲ್ಲ್ ಎಲ್ಲೇಲ್ ಇದಾರೋ.. ಹುಡುಕೋದು ಈ ರತ್ನನ ಪರಪಂಚ.. ಜನ್ಮ ಕೊಟ್ರೆ ಮಾತ್ರ ತಾಯಿ ಆಗಲ್ಲ.. ಒಡಹುಟ್ಟಿದ ಮಾತ್ರಕ್ಕೆ ಅದು ಸಂಬಂಧ ಆಗಲ್ಲ ಅನ್ನೋ ಯಾರು ಮುಟ್ಟದ ಕಥೆಯನ್ನ ಬರಹಗಾರ ರೋಹಿತ್ ಪದಕಿ ಅದ್ಭುತವಾಗಿ ಕಟ್ಟಿ ಮೊದಲ ನಿರ್ದೇಶನದಲ್ಲೇ ತಮ್ಮ ತಾಕತ್ ತೋರಿಸಿದ್ದಾರೆ. ಒಳ್ಳೋಳ್ಳೆ ಸಿನಿಮಾ ಕಥೆಗಳು ಒಳ್ಳೆ ನಟರಿಗೇನೆ ಸಿಗೋದು ಅನ್ನೋದಕ್ಕೆ ಡಾಲಿ ಧನಂಜಯರಿಗೆ ಸಿಕ್ಕಿರೋ ಈ ಸಿನಿಮಾನೇ ಸಾಕ್ಷಿ.. ಎಮೋಷನ್ಸ್-ಕಾಮಿಡಿ-ಥ್ರಿಲ್ಲು ಮೂರರ ಕಾಕ್ ಟೈಲ್ ರತ್ನನ್ ಪರಪಂಚ. ಸಖತ್ ಇಷ್ಟವಾಗೋ ಮಯೂರಿ ಪಾತ್ರದ ರೆಬಾ ಜಾನ್, ಪ್ರತಿ ಅಮ್ಮಂದಿರನ್ನ ನೆನೆಸೋ ಸರೋಜ ಪಾತ್ರದ ಉಮಾಶ್ರೀ ಜೊತೆ ಶೃತಿ. ಅದ್ಭುತ ನಟನೆಯ ಉಡಾಳ್ ಬಾಬು @ಪ್ರಮೋದ್, ಮುದ್ದಾಗಿ ಕಾಣೋ ಅನುಪ್ರಭಾಕರ್, ಅದು ಮಾಡಾಕೆ ಹೋಗಿ ಇದು ಮಾಡೋ ರವಿಶಂಕರ್,ಉಡಾಳನ ಮನದರಸಿ ಬೆಣ್ಣಿ ಯಾವ ಪಾತ್ರವೂ ಮರೆಯಲಾಗದ ಪಾತ್ರ. ಪಯಣದ ಕಾಮಿಡಿ ಡ್ರಾಮವನ್ನ ಕಣ್ತುಂಬುವಂತೆ ಚಿತ್ರಿಸಿರೋ ಶ್ರೀಶಾ, ಹಾಡುಗಳ ಮೂಲಕ ಸಖತ್ ಬ್ಯಾಕ್ ಗ್ರೌಂಡ್ ಸ್ಕೋರ್ ಸೇರಿ ವಾಟ್ ಎ ಮ್ಯೂಸಿಕ್ ಅನ್ನುವಂತೆ ಮಾಡೋ ಅಜನೀಶ್ ಸಿನಿಮಾದ ಉಸಿರು. ರತ್ನಾಕರ ಪಾತ್ರದಲ್ಲಿ ಧನು, ಸರೋಜ ಪಾತ್ರದಲ್ಲಿ ಉಮಾಶ್ರೀ ಎಂಟರ್ ಟೈನ್ ಮಾಡಿದ್ರೆ, ಉಡಾಳ್ ಪಾತ್ರದಲ್ಲಿ ಪ್ರಮೋದ್, ಯಲ್ಲವ್ವನ ಪಾತ್ರದಲ್ಲಿ ಶೃತಿ ಎಮೋಷನಲ್ ಮಾಡ್ತಾರೆ. ಸಿನಿಮಾ ನೋಡಿ ಒಂದು ಸತ್ಯ ಗೊತ್ತಾಯ್ತು. ಕೈಲಿರೋವರೆಗೋ ಕೈಲಿರೋ ಮಾಣಿಕ್ಯದ ಬೆಲೆ ಗೊತ್ತಾಗಲ್ಲ. ಯಾಕೋ ಸಿನಿಮಾವನ್ನ ಮತ್ತೆ ಮತ್ತೆ ನೋಡ್ಬೇಕು ಅನ್ನಿಸ್ತಿದೆ. ಸಾಧ್ಯವಾದ್ರೆ ಮನೆ ಮಂದಿ ಜೊತೆ ಕೂತು ನೋಡಿ. ಮಿಸ್ ಮಾಡ್ಬೇಡಿ.
ವಿಮರ್ಶೆ – ಕಿರಣ್ ಚಂದ್ರ