Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ರವಿ ಬಸ್ರೂರ್ ಕೈಚಳಕದಲ್ಲಿ ಮೂಡಿಬಂತು ವೀರಭದ್ರ ದೇವರ ಬೆಳ್ಳಿ ಬಾಗಿಲು

ರವಿ ಬಸ್ರೂರು ಸಿನಿಮಾ ಮಂದಿಗೆ ತೀರಾ ಪರಿಚಿತ ಹೆಸರು. ಕೆಜಿಎಫ್ ಸಿನಿಮಾದ ಮೂಲಕ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರವಿ ಬಸ್ರೂರು ತಮ್ಮ ಸ್ವಂತ ಪರಿಶ್ರಮದ ಮೂಲಕವೇ ಗುರುತಿಸಿಕೊಂಡಿರುವ ಅತ್ಯದ್ಭುತ ಪ್ರತಿಭೆ.

ಸಂಗೀತ ನಿರ್ದೇಶಕ ಆಗಿ ಸದ್ಯ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಪಟ್ಟಿರುವ ರವಿ ಅವರು ಇಂದು ಯಶಸ್ಸನ್ನು ಸಾಧಿಸಿದ ಸಂತಸದಲ್ಲಿದ್ದಾರೆ. ಇನ್ನು ಇದರ ಜೊತೆಗೆ ಅವರೊಬ್ಬರು ಶಿಲ್ಪಿ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ.

ಹೌದು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡಿರುವ ರವಿ ಬಸ್ರೂರು ಶಿಲ್ಪಿಯೂ ಹೌದು‌ ಮರ ಮಾತ್ರವಲ್ಲದೇ ಕಲ್ಲಿನ ಶಿಲ್ಪಗಳ ಕೆತ್ತನೆ ಕಾರ್ಯದಲ್ಲಿ ಪರಿಣಿತಿ ಪಡೆದಿರುವ ರವಿ ಅದಕ್ಕಾಗಿ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದರು. ಸಂಗೀತ ನಿರ್ದೇಶಕರಾಗಿ ಜಗತ್ತಿನಾದ್ಯಂತ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರು ಕೆತ್ತನೆ ಕೆಲಸಕ್ಕೆ ವಿದಾಯ ಹೇಳದಿರುವುದು ಆಶ್ಚರ್ಯದ ಸಂಗತಿ‌. ಇಂದಿಗೂ ಸಮಯ ಸಿಕ್ಕಾಗಲೆಲ್ಲಾ ಕೆತ್ತನೆ ಕಾರ್ಯದಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ರವಿ.
ಅದಕ್ಕೆ ಇತ್ತೀಚೆಗೆ ಕೊಲ್ಲೂರು ವೀರಭದ್ರ ದೇವಸ್ಥಾನಕ್ಕೆ ಬೆಳ್ಳಿ ಬಾಗಿಲಿನ ಕುಸುರಿ ಕೆಲಸವನ್ನು ಕೂಡಾ ರವಿ ಬಸ್ರೂರು ಮಾಡಿಕೊಟ್ಟಿದ್ದೇ ಸಾಕ್ಷಿ.

ಇನ್ನು ಕೆತ್ತನೆಯ ಕೆಲಸಗಳ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರವಿ ಅವರು ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದರು.
ಪ್ರಶಾಂತ್ ನೀಲ್ ಅವರ ಉಗ್ರಂ ಸಿನಿಮಾ ರವಿ ಅವರಿಗೆ ಹೆಸರನ್ನು ಮಾತ್ರವಲ್ಲದೇ ಪ್ರಶಸ್ತಿಯನ್ನು ಕೂಡಾ ತಂದುಕೊಟ್ಟಿತ್ತು. ಮಾತ್ರವಲ್ಲ ರವಿ ಬಸ್ರೂರು ಎಂಬ ಸಂಗೀತಗಾರನನ್ನು ಚಂದನವನಕ್ಕೆ ಪರಿಚಯಿಸಿತು. ಮುಂದೆ ಕರ್ವ, ಅಂಜನೀಪುತ್ರ, 100, ಮದಗಜ ಜೊತೆಗೆ ಕೆಜಿಎಫ್ ಚಾಪ್ಟರ್ 1 ಹಾಗು ‘ಕೆಜಿಎಫ್ ಚಾಪ್ಟರ್ 2 ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ ಪ್ರತಿಭಾವಂತ.

ಇನ್ನು ಕೋಸ್ಟಲ್ ವುಡ್ ನಲ್ಲಿಯೂ ಕಮಾಲ್ ಮಾಡಿರುವ ರವಿ ಅವರು ಎಕ್ಕ ಸಕ, ಜಸ್ಟ್ ಮದುವೆಲ್ಲಿ ಚಿತ್ರಗಳಿಗರ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುತ್ತಿರುವ ಕುಂದಾಪುರದ ಪ್ರತಿಭೆ ಸಲ್ಮಾನ್ ಖಾನ್ ಅವರ ‘ಅಂತಿಮ್: ದಿ ಫೈನಲ್ ಟ್ರುಥ್’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

Related posts

ಮಗನಿಗೆ ಅಕ್ಷರಾಭ್ಯಾಸ ಮಾಡಿಸಿದ ಶ್ವೇತಾ ಚೆಂಗಪ್ಪ

Nikita Agrawal

ತನಿಖಾ ಪತ್ರಕರ್ತೆಯಾಗಿ ತೆರೆ ಮೇಲೆ ಬರಲಿದ್ದಾರೆ ಕಾವ್ಯಾ ಶೆಟ್ಟಿ

Nikita Agrawal

ಯಶ್ ನಟನೆಯ ಕೆಜಿಎಫ್ ಗೆ 3 ವರುಷ…ನಂತರ ಏನೆಲ್ಲಾ ಬದಲಾವಣೆಗಳಾಯಿತು..!?

Nikita Agrawal

Leave a Comment

Share via
Copy link
Powered by Social Snap