ಹೈದ್ರಬಾದ್ ಬೆಂಗಳೂರಿನ ಸುತ್ತಮುತ್ತ ಈಗಾಗಲೇ ಶೂಟಿಂಗ್ ಮಾಡಿ ಮುಗಿಸಿರುವ ಚಿತ್ರತಂಡ ಸಿನಿಮಾದ ಪ್ರಮುಖ ದೃಶ್ಯಕ್ಕಾಗಿ 1ಕೋಟಿ ವೆಚ್ಚದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದು ಭಾರಿ ಸುದ್ದಿಯಾಗಿತ್ತು ಅಂದ್ಹಾಗೆ ದಿ ವಿಲನ್ ಚಿತ್ರಕ್ಕೆ ಬಂಡವಾಳ ಹಾಕಿದ್ದ ಸಿಆರ್ ಮನೋಹರ್ ಅವರೇ ಈ ಸಿನಿಮಾವನ್ನ ಪ್ರೊಡ್ಯೂಸ್ ಮಾಡುತ್ತಿದ್ದಾರೆ …
ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ ..ಚಿತ್ರದಲ್ಲಿ ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ನಟಿಸಿದ್ದಾರೆ ಚಿತ್ರೀಕರಣ ಮುಗಿದಿರುವ ಖುಷಿಯಲ್ಲಿ ಚಿತ್ರತಂಡ ಕುಂಬಳಕಾಯಿ ಹೊಡೆದು ಸಂತಸವನ್ನ ಹೊರಹಾಕಿದೆ …
ರೆಮೋ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಗೂಗ್ಲಿ ಚಿತ್ರದ ನಂತರ ಪವನ್ ಒಡೆಯರ್ ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ ಅದಷ್ಟೇ ಅಲ್ಲದೆ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಎಂಟರ್ಟೈನ್ ಕೂಡ ಮಾಡಲಿದ್ದಾರೆ ..
ಸದ್ಯ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವ ಸಿನಿಮಾ ತಂಡ ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದೆ ಇನ್ನ ಕೆಲವೇ ದಿನಗಳಲ್ಲಿ ರೆಮೋ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಲಿದೆ…