Karnataka Bhagya
Blogಕಲೆ/ಸಾಹಿತ್ಯ

ಆನಂದ್ ಇಂಗಳಗಿಯ ಪಾತ್ರಕ್ಕೆ ಬದಲಾವಣೆ ಏಕೆ?

ಕೆಜಿಎಫ್ ಚಾಪ್ಟರ್ 2 ಚಿತ್ರ ನಿಸ್ಸಂದೇಹವಾಗಿ ಪ್ರಪಂಚದಾದ್ಯಂತ ಅತ್ಯಂತ ನಿರೀಕ್ಷಿತ ಚಿತ್ರ. ಬಿಡುಗಡೆಗೆ ಬಾಕಿ ಇರುವುದು ಕೇವಲ ಎರಡೇ ಎರಡು ದಿನಗಳು. ಸದ್ಯ ಎಲ್ಲೆಲ್ಲೂ ಕೆಜಿಎಫ್ ನದ್ದೇ ಸದ್ದು. ಚಿತ್ರತಂಡ ಕೂಡ ಭಾರತದಾದ್ಯಂತ ಸಂಚರಿಸಿ ಜನರನ್ನ ಸೆಳೆಯೋ ಕಾರ್ಯದಲ್ಲಿದ್ದಾರೆ. ರಾಕಿ ಭಾಯ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಶ್ರೀನಿಧಿ ಶೆಟ್ಟಿ, ಅಧೀರ ಸಂಜು ಬಾಬಾ, ಇವರೆಲ್ಲರ ಜೊತೆ ‘ಕೆಜಿಎಫ್’ ಕಥೆಯ ಅಸಲಿ ನಾಯಕ ಪ್ರಶಾಂತ್ ನೀಲ್ ಕೂಡ ಸುದ್ದಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಪತ್ರಿಕಾಗೋಷ್ಟಿಯಲ್ಲಿ ನೀಲ್ ಎಲ್ಲ ಕೆಜಿಎಫ್ ಅಭಿಮಾನಿಗಳ ಮನದಲ್ಲಿದ್ದ ಪ್ರಶ್ನೆಯನ್ನ ಎದುರಿಸಿದ್ದಾರೆ. ಅದುವೇ ಆನಂದ್ ಇಂಗಳಗಿ ಯಾನೆ ಅನಂತ್ ನಾಗ್ ಅವರ ಪಾತ್ರದ ಬಗ್ಗೆ.

ಕೆಜಿಎಫ್ ಕಥೆಗೆ ಹುರುಪು ತುಂಬಿದಂತ ನಟ-ನಟಿಯರಲ್ಲಿ ಅನಂತ್ ನಾಗ್ ಅವರ ಹೆಸರು ದೊಡ್ಡಕ್ಷರಗಳಲ್ಲಿ ಬರೆಯಬಹುದು. ಅವರ ಅಭಿನಯ, ಆ ಕಥೆ ಹೇಳಿದ ಪರಿ, ಆ ಕಂಠ ಎಲ್ಲವೂ ನೋಡುಗರನ್ನು ಕಥೆಯೊಳಗೆ ಇಳಿಸಿ ಕೂರಿಸಿತ್ತು. ಆದರೆ ಚಿತ್ರದ ಎರಡನೇ ಅಧ್ಯಾಯ ಅಂದರೆ ‘ಕೆಜಿಎಫ್ ಚಾಪ್ಟರ್ 2’ರಲ್ಲಿ ಅನಂತ್ ನಾಗ್ ಅವರು ಅಭಿನಯಿಸುತ್ತಿಲ್ಲ. ಈ ವಿಷಯ ಚಿತ್ರದ ಟ್ರೈಲರ್ ನಿಂದ ಖಾತ್ರಿಯಾಗಿತ್ತು. ಈ ಪಾತ್ರಕ್ಕೆ ಸರಿಸಮನಾದ ವಿಜಯೇಂದ್ರ ಇಂಗಳಗಿ ಎಂಬ ಪಾತ್ರವಕ್ಕೆ ಪ್ರಖ್ಯಾತ ನಟ ಪ್ರಕಾಶ್ ರಾಜ್ ಬಣ್ಣ ಹಚ್ಚಿದ್ದರು. ಎಲ್ಲ ಅಭಿಮಾನಿಗಳು ಅನಂತ್ ನಾಗ್ ಅವರ ಕಥೆ ಕೇಳಲು ಕಾಯುತ್ತಿದ್ದರು. ಆದರೆ ಅವರ್ಯಾಕೆ ಸಿನಿಮಾದಲ್ಲಿ ಇಲ್ಲ ಎಂಬ ಪ್ರಶ್ನೆಯನ್ನ ನೀಲ್ ಎದುರಿಸಿದ್ದಾರೆ. ಅಲ್ಲದೇ ಅದಕ್ಕೆ ಚಾಣಕ್ಷತನದಿಂದಲೇ ಉತ್ತರಿಸಿದ್ದಾರೆ ಕೂಡ.

“ಅನಂತ್ ನಾಗ್ ಅವರು ಒಬ್ಬ ಹಿರಿಯ ನಟರು. ಕೆಜಿಎಫ್ ಚಾಪ್ಟರ್ 2ರಿಂದ ಹೊರಗುಳಿಯುವುದು ಅವರ ವೈಯಕ್ತಿಕ ನಿರ್ಧಾರ. ಹಾಗಾಗಿ ಅದನ್ನು ನಾವು ತಿಳಿಸುವುದು ತಪ್ಪಾಗಬಹುದು. ಅದನ್ನ ಅವರೇ ಹೇಳುವುದೇ ಸರಿ. ನಾವು ಅವರ ನಿರ್ಧಾರವನ್ನ ಗೌರವಿಸಿದ್ದೇವೆ. ನಮ್ಮ ಚಿತ್ರದಲ್ಲಿ ಪಾಲ್ಗೊಳ್ಳೋ ಯಾವೊಬ್ಬ ಕಲಾವಿದರನ್ನು ಕೂಡ ಕೊನೆವರೆಗೆ ನಮ್ಮೊಂದಿಗಿರುವಂತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಹಾಗಾಗಿ ನಾವು ಅನಂತ್ ನಾಗ್ ಅವರನ್ನು ಹಾಗು ಅವರ ನಿರ್ಧಾರವನ್ನು ಅಭಿಮಾನದೊಂದಿಗೆ ಕಾಣುತ್ತೇವೆ. ಅಲ್ಲದೇ ಆ ಪಾತ್ರಕ್ಕೆ ಅತ್ಯಂತ ಸೂಕ್ಷ್ಮತೆಯಿಂದ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ. ನೀವು ಸಿನಿಮಾ ನೋಡಿದಾಗ ನಿಮಗೆ ತಿಳಿಯುತ್ತದೆ” ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಎಷ್ಟೇ ಆದರೂ ಕೆಜಿಎಫ್ ಸಿನಿಮಾದಲ್ಲಿ ಅನಂತ್ ನಾಗ್ ಅವರು ಇರುವುದಿಲ್ಲ ಅನ್ನುವುದು ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸುವುದಂತೂ ಖಂಡಿತ.

Related posts

ಕನ್ನಡದ ಮಾರ್ಗರೇಟ್ ಇಂಚರ

Nikita Agrawal

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

Karnatakabhagya

ಮತ್ತೆ ಬರಲಿದೆ ಮಜಾಟಾಕೀಸ್… ಯಾವಾಗ ಗೊತ್ತಾ?

Nikita Agrawal

Leave a Comment

Share via
Copy link
Powered by Social Snap