ಕನ್ನಡ ಸಿನಿಮಾರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ..ಇತ್ತೀಚೆಗಷ್ಟೇ ಪತ್ನಿಗೆ ಸೀಮಂತ ಮಾಡಿ ಸಂಭ್ರಮಿಸಿದ್ದರು…ಸದ್ಯ ರಿಷಬ್ ಶೆಟ್ಟಿ ಅವರ ಮನೆಗೆ ಎರಡನೆ ಮಗುವಿನ ಆಗಮನವಾಗಿದೆ ..
ಹೌದು ಈಗಾಗಲೇ ಮುದ್ದು ಮಗನನ್ನ ಎತ್ತಿ ಆಡಿಸಿರುವ ರಿಶಬ್ ಶೆಟ್ಟಿಗೆ ಈಗ ಮಗಳನ್ನ ಆಡಿಸುವ ಸಮಯ…ಹೌದು ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ… ಹೆಣ್ಣು ಮಗುವಿನ ಆಗಮನದಿಂದ ರಿಷಬ್ ಶೆಟ್ಟಿ ಮನೆಯಲ್ಲಿ ಸಂಭ್ರಮ ಜೋರಾಗಿದೆ ..
ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದು ಮಗಳು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ …