ರಾಕಿಂಗ್ ಸ್ಟಾರ್ ಯಶ್ ಅಂದರೆ ನೆನಪಾಗುವುದೇ ಅವರ ನೈಸರ್ಗಿಕ ನಟನೆ ಅವರ ಸ್ನೇಹಪರತೆ ಸಿನಿಮಾ ನಟನೆ ಬಗೆಗಿನ ಅವರ ಒಲವು. ಅದಕ್ಕೆ ನಿದರ್ಶನವೆಂಬಂತೆ KGF chapter 1 ಸಿನಿಮಾದಲ್ಲಿ ಇಡೀ ದೇಶಕ್ಕೆ ಯಶ್ ಯಾರೆಂದು ತಿಳಿಯುವಂತಾಗಿದೆ.
ಇಡೀ ದೇಶ KGF chapter 2 ಗೆ ಕಾತುರದಿಂದ ಕಾಯುತ್ತಿರುವುದು ಅತಿಶಯೋಕ್ತಿಯಲ್ಲ. ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಯಶ್ ಅವರು ಡೈರೆಕ್ಷನ್ ಮಾಡುತ್ತಾರಾ ಎಂಬ ಪ್ರಶ್ನೆಗೆ ಯಶ್ ಅವರ ಉತ್ತರ ಏನಾಗಿತ್ತು ಗೊತ್ತಾ??
ಯಶ್ ಅವರು ನಾನು ಮೂಲತಃ ರಂಗಭೂಮಿ ಹಿನ್ನೆಲೆ ಇಂದ ಬಂದವನು ನಾನು ನಟನೆಯಿಂದ ಅಭಿಮಾನಿಗಳಿಗೆ ಖುಷಿ ಕೊಡಬೇಕು. ಅದರಲ್ಲೇ ನನಗೆ ಖುಷಿ ಇದೆ.
ಡೈರೆಕ್ಷನ್ ಈಸ್ ನಾಟ್ ಮೈ ಕಪ್ ಆಫ್ ಟೀ ಎಂದು ಹೇಳಿದ್ದಾರೆ. ಡೈರೆಕ್ಷನ್ ಮಾಡುವಷ್ಟು ಪ್ರತಿಭಾವಂತ ನಾನಲ್ಲ ಎನ್ನುತ್ತಾ ಡೈರೆಕ್ಷನ್ ಬಗ್ಗೆ ಸಧ್ಯಕ್ಕೆ ಒಲವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.