Karnataka Bhagya
Blogಕರ್ನಾಟಕ

ಕನ್ನಡದ ಸ್ವಂತ ‘RRR’

RRR ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ತೆಲುಗಿನ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾವಾಗಿದ್ದ ರಾಜಮೌಳಿ ಅವರ ನಿರ್ದೇಶನದ RRR ಸಿನಿಮಾ. ಎಲ್ಲೆಡೆ ಗುಲ್ಲೆಬ್ಬಿಸಿ, ಚಿತ್ರಮಂದಿರಗಳನ್ನ ಜನರಿಂದ ತುಂಬುವಂತೆ ಮಾಡಿ, ಹಲವು ದಾಖಲೆಗಳನ್ನು ಬರೆದಂತ ಸಿನಿಮಾ ಆಗಿತ್ತು RRR. ನಮ್ಮ ಕನ್ನಡದಲ್ಲೂ ಒಂದು RRR ಇದೆ. ಆದರೆ ಅದು ಸಿನಿಮಾವಲ್ಲ. ಬದಲಾಗಿ ಸಿನಿಮಾ ಮಾಡುವ ಮೂರು ಅತಿ ಚಾಣಾಕ್ಷರು. ಸಿನಿರಸಿಕರು ಸದ್ಯ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಅವರನ್ನು ಕನ್ನಡದ RRR ಎಂದು ಸಂಭೋದಿಸುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ರಕ್ಷಿತ್ ಶೆಟ್ಟಿಯವರ ‘777 ಚಾರ್ಲಿ’ ಸಿನಿಮಾ ಎಲ್ಲೆಡೆ ಪ್ರಶಂಸೆಗೊಳಗಾಗುತ್ತಿದ್ದು, ರಕ್ಷಿತ್ ಹಾಗು ಚಿತ್ರತಂಡ ಸಿನಿಮಾದ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ. ಜೂನ್ 10ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಕ್ಷಿತ್ ಜೊತೆಗೆ ರಾಜ್ ಬಿ ಶೆಟ್ಟಿಯವರು ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗೆಗಿನ ಸಂದರ್ಶನವೊಂದರಲ್ಲಿ ನಿರೂಪಕರು, ಕನ್ನಡದ RRR ನ ಸಿನಿಮಾ ಯಾವಾಗ ಬರುತ್ತದೆ? ಎಂದು ಕೇಳಿದ ಪ್ರಶ್ನೆಗೆ, “ಖಂಡಿತ ಬರುತ್ತದೆ. ಈ ರೀತಿಯ ಕಥೆಯೊಂದನ್ನು ಹೆಣೆದಿಟ್ಟಿದ್ದೇನೆ. ನಾನು ರಾಜ್, ರಿಷಬ್ ಹಾಗು ಪ್ರಮೋದ್ ಶೆಟ್ಟಿ ನಟಿಸಬಹುದಾದಂತಹ ಕಥೆಯೊಂದಕ್ಕೆ ಚಿತ್ರಕಥೆಯನ್ನು ಸದ್ಯ ಬರೆಯುತ್ತಿದ್ದೇನೆ. ಈ ಸಿನಿಮಾ ನನ್ನ ಕನಸಿನ ‘ಪುಣ್ಯಕೋಟಿ’ಯ ನಂತರ ಬರಬಹುದು. ಇದರ ನಡುವೆ ರಾಜ್ ಬಿ ಶೆಟ್ಟಿ ಅವರು ಯಾವುದಾದರೂ ಕಥೆ ಬರೆದರೆ ನಾನು ನಟಿಸಲು ಸಿದ್ಧ ” ಎಂದಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

ಈ ಮಾತಿಗೆ ತಮಾಷೆಯಾಗೇ ತರಲೆ ತೆಗೆದ ರಾಜ್ ಬಿ ಶೆಟ್ಟಿ, “ಕಥೆ ಬರೆದರೆ ನಟಿಸುತ್ತಾರಂತೆ, ಆಸಾಮಿ ಸದ್ಯ ಕೈಗೆ ಸಿಗುವುದಿಲ್ಲ. ಇದಾದ ಮೇಲೆ ಸಾಲಾಗಿ ನಾಲ್ಕೈದು ಸಿನಿಮಾ ಇದೆ ಇವರದ್ದು. ಈ ನಡುವೆ ನಮ್ಮ RRR ಜೋಡಿಯ ಚಿತ್ರವನ್ನ ನಾನು ಮೊದಲು ಮಾಡುತ್ತೇನೆ, ತಾನು ಮೊದಲು ಮಾಡುತ್ತೇನೆ ಎನ್ನುತ್ತಾರೆ ಇವರು ಮತ್ತೆ ರಿಷಬ್. ಇವರಿಬ್ಬರ ನಡುವೆ ನಾನು ಸೌಮ್ಯವಾಗಿ ನೀವು ಮಾಡುವುದನ್ನ ಮಾಡಿ, ನಾನು ನಿಮ್ಮ ನಡುವೆ ಇರುತ್ತೇನೆ ಎಂದು ಹೇಳಿದ್ದೇನೆ ” ಎಂದು ಹೇಳಿ ನಗುತ್ತಾರೆ. ಆದರೆ ಈ ಮೂವರ ಪ್ರಭಾವವನ್ನು ಈಗಾಗಲೇ ‘ಗರುಡ ಗಮನ ವೃಷಭ ವಾಹನ’ ಸಿನಿಮಾದಿಂದ ನೋಡಿ ಸಂತುಷ್ಟರಾಗಿರೋ ಕನ್ನಡಿಗರು, ಇವರ ಸಿನಿಮಾ ಯಾವಾಗ ಬರುತ್ತದೆ ಎಂದು ಕಾಯುವಂತಾಗಿದೆ.

ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘777 ಚಾರ್ಲಿ’ ಸಿನಿಮಾ ಕೌಟುಂಬಿಕ ಪ್ರೇಕ್ಷಕರಿಗೂ, ಯುವಜನತೆಗೂ ಪ್ರತಿಯೊಬ್ಬರಿಗೂ ಮನಸನ್ನ ಕಾಡುತ್ತಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನವನ್ನ ಸಿನಿಮಾ ಕಾಣುತ್ತಿದ್ದು, ಚಿತ್ರತಂಡ ಹಾಗು ಪ್ರೇಕ್ಷಕರಿಬ್ಬರೂ ಸಂತಸಗೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ, ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ಗೋಪಾಲ ಕೃಷ್ಣ ದೇಶಪಾಂಡೆ, ದಾನಿಶ್ ಸೈಟ್ ಮುಂತಾದವರು ನಟಿಸಿದ್ದಾರೆ.

Related posts

ಕ್ರಿಸ್ಮಸ್ ಸೆಲಬ್ರೇಟ್ ಮಾಡಿದ ಯಶ್- ರಾಧಿಕಾ

Nikita Agrawal

ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಕಂಡ ನಟ, ಡಾಲಿ ಧನಂಜಯ.

Nikita Agrawal

ಹುಟ್ಟುಹಬ್ಬದ ದಿನ ಅಪ್ಪು ನೆನೆದು ಭಾವುಕರಾದ ಅನುಶ್ರೀ

Nikita Agrawal

Leave a Comment

Share via
Copy link
Powered by Social Snap