Karnataka Bhagya
Blogಕ್ರೀಡೆ

ಒಂದಿಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಅಭಿಮಾನಿಗಳು!!!!

ಒಬ್ಬ ನಟನ ಅಭಿಮಾನಿಯಾದರೆ ಆತನ ಚಿತ್ರಕ್ಕೆ ಮೊದಲು ಓಡುವುದು ಸಾಮಾನ್ಯ. ಆಸಕ್ತಿಯೇ ಇಲ್ಲದಿರೋ ಸ್ನೇಹಿತರನ್ನ ಕೂಡ ಎಳೆದುಕೊಂಡು ಬಂದು ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಕಣ್ತುಂಬಿಸಿಕೊಳ್ಳುವುದು ಸಹ ಒಂದು ರೀತಿ ಸಾಮಾನ್ಯ ಪ್ರಕ್ರಿಯೆಯೇ. ಆದರೆ ತಮಗಿಷ್ಟವಾದ ನಟನ ಸಿನಿಮಾಗಾಗಿ ಒಂದಿಡೀ ಚಿತ್ರಮಂದಿರದಲ್ಲಿರೋ ಎಲ್ಲ ಸೀಟುಗಳನ್ನು ಖರೀದಿಸಿದರೆ, ಆ ಅಭಿಮಾನಕ್ಕೆ ಏನೆನ್ನಬಹುದು.

ಇಂತಹ ಒಬ್ಬ ಅಭಿಮಾನಿ ಈಗ ಪತ್ತೆಯಾಗಿದ್ದಾರೆ. ದಕ್ಷಿಣ ಭಾರತದ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ RRR ಇದೇ ಮಾರ್ಚ್ 25ರಂದು ತೆರೆಕಾಣುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಟೋಲಿವುಡ್ ನ ದಿಗ್ಗಜ ಸ್ಟಾರ್ ಗಳಾದ ಜೂನಿಯರ್ ಎನ್ ಟಿ ಆರ್ ಹಾಗು ರಾಮಚರಣ್ ಒಟ್ಟಿಗೆ ನಟಿಸಿ ‘ಬಾಹುಬಲಿ’ಯಿಂದ ಜಗದ್ವಿಖ್ಯಾತರಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಪ್ರೀಮಿಯರ್ ಶೋಗಳ ಟಿಕೆಟಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದ್ದು, ದೇಶವಿದೇಶಗಳಲ್ಲಿ ಈಗಾಗಲೇ ಬಹುಪಾಲು ಟಿಕೆಟ್ ಗಳು ಹಂಚಿಕೆಯಾಗಿ ಹೋಗಿವೆ.

ಈ ನಡುವೆ ಅಮೇರಿಕಾದಲ್ಲಿರುವ ಜೂನಿಯರ್ ಅಭಿಮಾನಿ ಬಳಗವೊಂದು RRR ಪ್ರೀಮಿಯರ್ ಶೋಗೆ ಸಿನಿಮಾದಿರದಲ್ಲಿರೋ ಎಲ್ಲ ಆಸನಗಳನ್ನು ಖರೀದಿಸಿದೆ. ಅಲ್ಲಿನ ಫ್ಲೋರಿಡಾದಲ್ಲಿರೋ “Cinemark Tinseltown” ಚಿತ್ರಮಂದಿರದಲ್ಲಿ ಸಂಜೆ 6ಗಂಟೆಗೆ ಗೊತ್ತಾಗಿರೋ ಚಿತ್ರಮಂದಿರದಲ್ಲಿನ ಎಲ್ಲ ಟಿಕೆಟ್ಗಳನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ತಮ್ಮ ನಟನ ಬಗ್ಗೆ ಹಾಗೇ ಅವರ ಚಿತ್ರದ ಬಗೆಗಿನ ಅಭಿಮಾನವನ್ನ ಹೊರಹಾಕಿದ್ದಾರೆ.

RRR ಭಾರತದಾದ್ಯಂತ ಬಹುನಿರೀಕ್ಷಿತ ಸಿನಿಮಾವಾಗಿದೆ. ಜ್ಯೂನಿಯರ್ ಎನ್ ಟಿ ಆರ್, ರಾಮಚರಣ್ ಜೊತೆಗೆ ಅಜಯ್ ದೇವಗನ್, ಆಲಿಯಾ ಭಟ್, ಶ್ರೀಯ ಶರಣ್ ಮುಂತಾದ ದೊಡ್ಡ ಹೆಸರುಗಳು ತಾರಾಬಳಗದಲ್ಲಿದೆ. ಇದೇ ಮಾರ್ಚ್ 25ರಿಂದ RRR ತನ್ನ ಗರ್ಜನೆಯನ್ನ ಬೆಳ್ಳಿತೆರೆ ಮೇಲೆ ಆರಂಭಿಸಲಿದೆ.

Related posts

ಸಿನಿಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ…

Nikita Agrawal

ಆನಂದ್ ಇಂಗಳಗಿಯ ಪಾತ್ರಕ್ಕೆ ಬದಲಾವಣೆ ಏಕೆ?

Nikita Agrawal

ಭಟ್ರ ಜೊತೆ ಪದವಿಪೂರ್ವ ಕಾಲೇಜಿನಲ್ಲಿ ದಿವ್ಯ ಉರುಡುಗ.!

Karnatakabhagya

Leave a Comment

Share via
Copy link
Powered by Social Snap