ಬಾಲಿವುಡ್ ನ ಸುಲ್ತಾನ್ ಎಂದೇ ಜನಪ್ರಿಯರಾಗಿರುವ ಸಲ್ಮಾನ್ ಖಾನ್ ತನ್ನ ತಾಯಿಯೊಂದಿಗೆ ಇರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ತಮ್ಮ ತಾಯಿ ಸಲ್ಮಾ ಖಾನ್ ಜೊತೆ ಮಧುರ ಕ್ಷಣದ ಫೋಟೋವೊಂದನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ತನ್ನ ತಾಯಿ ಮಡಿಲಿನಲ್ಲಿ ತಲೆಯನ್ನಿಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಸಲ್ಮಾನ್ ಖಾನ್ “ತಾಯಿಯ ಮಡಿಲು ಸ್ವರ್ಗ” ಎಂದು ಬರೆದುಕೊಂಡಿದ್ದಾರೆ.

ಇನ್ನು ಸಲ್ಮಾನ್ ಖಾನ್ ಅವರು ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 18 ಲಕ್ಷಕ್ಕೂ ಅಧಿಕ ಜನರು ಲೈಕ್ಸ್ ಬಂದಿದೆ. ಮಾತ್ರವಲ್ಲ ಅನೇಕರು ಈ ಫೋಟೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮ್ಮಾ ಮಗ ಜೋಡಿಯನ್ನು ಜನ ಇಷ್ಟ ಪಟ್ಟಿದ್ದು ಮಗ ಎಂದರೆ ಈ ರೀತಿ ಇರಬೇಕು ಎಂದು ಕಮೆಂಟ್ ಕೂಡಾ ಮಾಡುತ್ತಿದ್ದಾರೆ.

ಸಲೀಂ ಖಾನ್ ಹಾಗೂ ಸಲ್ಮಾ ಖಾನ್ ಪುತ್ರನಾಗಿರುವ ಸಲ್ಮಾನ್ ಖಾನ್ ಬಾಲಿವುಡ್ ನಟ ಬೇಡಿಕೆಯ ನಟರಲ್ಲಿ ಒಬ್ಬರು. ಆಯುಷ್ ಶರ್ಮಾ ಅವರ “ಅಂತಿಮ್” ಚಿತ್ರದಲ್ಲಿ ನಟಿಸಿದ್ದ ಸಲ್ಮಾನ್ ಖಾನ್ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಮೊನ್ನೆಯಷ್ಟೇ ರಿಲೀಸ್ ಆದ “ಮೈನ್ ಚಲಾ” ಎಂಬ ಹಾಡಿನಲ್ಲಿ ಅಭಿನಯಿಸಿದ್ದು ಇದನ್ನು ಜನ ಮೆಚ್ಚಿಕೊಂಡಿದ್ದರು.

- ಜೂನ್ 14ರಂದು ಸಿಎಂ ಸಿದ್ದರಾಮಯ್ಯ,ಎಐಸಿಸಿ ಅಧ್ಯಕ್ಷ ಖರ್ಗೆ ಸೇರಿ ಸಚಿವರ ದಂಡೇ ಆಗಮನ.
- ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕ ತುನ್ನೂರು
- ರಾಣಿ ಅಬ್ಬಕ್ಕ ದೇವಿ ರಾಜ್ಯ ಪ್ರಶಸ್ತಿಗೆ ಪತ್ರಕರ್ತ ಸುರೇಶ ಲೇಂಗಟಿ ಆಯ್ಕೆ….
- ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆ
- ಮಹಾಸಭಾಕ್ಕೆ ಹಲವರ ನೇಮಕಸಂಘಟನೆ ಆನೆಬಲ : ಸುರೇಶ ಜಾಕಾ
- ತುಂತುರು ನೀರಾವರಿ ಘಟಕದಿಂದ ಹೆಚ್ಚಿನ ಇಳುವರಿ ಮಾಡಿ; ಶಾಸಕ ತುನ್ನೂರ್
- ೮೫ ಲಕ್ಷ್ಯ ವೆಚ್ಚದ ಐದು ಶಾಲಾ ಕೋಣೆ,ಕಂಪೌAಡ ಕಾಮಗಾರಿಗೆ ಭೂಮಿ ಪೂಜೆ.
- ಜೇವರ್ಗಿ ಬಾಲಕಿ ಆತ್ಮಹತ್ಯೆ, ಬಸವೇಶ್ವರ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ.
- ಮಲ್ಲಯ್ಯನ ಮೂರ್ತಿ ಕಿತ್ತಿ ನಿಧಿ ಹುಡುಕಾಟ
- ಸಮ-ಸಮಾಜದ ನಿರ್ಮಾತೃ ಡಾ.ಬಿ.ಆರ್.ಅಂಬೇಡ್ಕರ್ : ಕಾಶೀನಾಥ ನಾಟೇಕಾರ್