ಸಮಂತಾ ಮತ್ತು ನಾಗ ಚೈತನ್ಯ ಅವರ ಅಗಲಿಕೆ ಅವರ ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಚರ್ಚೆಯಾಗಿತ್ತು… ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯ ದಿನದಂದು ಉಟ್ಟಿದ್ದ ಸೀರೆಯನ್ನು ನಟಿ ಸಮಂತಾ ಹಿಂತಿರುಗಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಸೀರೆ ನಾಗಚೈತನ್ಯ ಅವರ ಅಜ್ಜಿ ಡಿ ರಾಜೇಶ್ವರಿ ಅವರಿಗೆ ಸೇರಿದ್ದಂತೆ ಈಗ ಶಾಕುಂತಲಂ ಸಿನಿಮಾ ನಟಿ ಈಗ ಅದನ್ನು ಹಿಂದಿರುಗಿಸಿದ್ದಾರೆ.
ಅಕ್ಟೋಬರ್ 2, 2021 ರಂದು, ಸಮಂತಾ ಮತ್ತು ನಾಗ ಚೈತನ್ಯ ತಾವಿಬ್ಬರು ವಿಚ್ಛೆದನಾ ಪಡೆದುಕೊಳ್ಳುವ ವಿಚಾರವನ್ನ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು….ಅವರ ಐದನೇ ವಿವಾಹ ವಾರ್ಷಿಕೋತ್ಸವದ ಕೆಲವು ದಿನಗಳ ಮೊದಲು, ದಂಪತಿಗಳು ಬೇರೆಯಾದರು….ವಿಚ್ಛೆದನಾ ಆಗುವ ಮುನ್ನವೇ ಸಮಂತಾ ತನ್ನ ಹೆಸರಿನಜೊತೆಗಿದ್ದ ಅಕ್ಕಿನೇನಿಯನ್ನು ಕೈಬಿಟ್ಟಿದ್ದರು..ಮತ್ತು ನಾಗ ಚೈತನ್ಯ ಜೊತೆಗಿನ Instagram ಪೋಸ್ಟ್‌ಗಳನ್ನು ಕೂಡ ಡಿಲೀಟ್ ಮಾಡಿದ್ದರು…
ಇದೀಗ ಸಮಂತಾ ತಮ್ಮ ಮದುವೆಯ ಸೀರೆಯನ್ನು ನಾಗ ಚೈತನ್ಯ ಅವರಿಗೆ ಹಿಂತಿರುಗಿಸಿದ್ದಾರೆ ಎನ್ನಲಾಗಿದೆ…. ಅದು ದಗ್ಗುಬಾಟಿ ಕುಟುಂಬಕ್ಕೆ ಸೇರಿದ್ದರಿಂದ ಅದನ್ನು ವಾಪಸ್ ಕೊಡಲು ನಟಿ ನಿರ್ಧರಿಸಿದ್ದರಂತೆ…ಸಮಂತಾ ಉಟ್ಟಿದ್ದ ಸೀರೆ ಚಿತ್ರ ನಿರ್ಮಾಪಕ ಡಿ ರಾಮನಾಯ್ಡು ಅವರ ಪತ್ನಿ ಛಾಯ್ ಅವರ ಅಜ್ಜಿ ಡಿ ರಾಜೇಶ್ವರಿ ಅವರು ಉಟ್ಟಿದ್ದರು. ನಟಿ ತನ್ನ ದೊಡ್ಡ ದಿನದಂದು ಕುಟುಂಬದ ಸೀರೆಯನ್ನು ಧರಿಸುವ ಮೂಲಕ ಅಕ್ಕಿನೇನಿ ಮತ್ತು ದಗ್ಗುಬಾಟಿ ಮನೆತನವನ್ನು ಹೆಮ್ಮೆಪಡುವಂತೆ ಮಾಡಿದರು.
ನಾಗ ಚೈತನ್ಯ ಅಥವಾ ಅವರ ಕುಟುಂಬಕ್ಕೆ ಸೇರಿದ ಯಾವುದನ್ನೂ ಇಟ್ಟುಕೊಳ್ಳಲು ಸಮಂತಾ ಬಯಸುವುದಿಲ್ಲ ಎಂದು ವದಂತಿಗಳು ಸೂಚಿಸುತ್ತವೆ. ಹಾಗಾಗಿ ಸೀರೆಯನ್ನು ಹಿಂತಿರುಗಿಸಿದ್ದಾರೆ….
ತಮ್ಮ ವಿಚ್ಛೇದನವನ್ನು ಘೋಷಿಸಿದ ನಂತರ, ನಾಗ ಚೈತನ್ಯ ಮತ್ತು ಅವರ ಕುಟುಂಬ ಸದಸ್ಯರು ಸಮಂತಾ ಅವರಿಗೆ 200 ಕೋಟಿ ರೂ. ಜೀವನಾಂಶವನ್ನು ನೀಡಲುಮುಂದಾಗಿದ್ದರು.. ಆದರೆ, ನಟಿ ಈ ಪ್ರಸ್ತಾಪವನ್ನು ನಿರಾಕರಿಸಿದರು ಮತ್ತು ಚೇಯ್ ಅಥವಾ ಅವರ ಕುಟುಂಬದಿಂದ ತನಗೆ ಒಂದು ಪೈಸೆಯೂ ಬೇಡ ಎಂದು ಹೇಳಿದರು.
ಸಮಂತಾ ಮತ್ತು ನಾಗ ಚೈತನ್ಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಅಕ್ಟೋಬರ್ 2017 ರಲ್ಲಿ ಇವರಿಬ್ಬರ ವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿತ್ತು…