ನಟ ನಾಗಚೈತನ್ಯ ಹಾಗೂ ಸಮಂತಾ ನಡುವಿನ ದಾಂಪತ್ಯದ ಬಿರುಕು ಈಗ ಎಲ್ಲರಿಗೂ ಗೊತ್ತಿರುವ ವಿಚಾರವೇ …ಇಬ್ಬರೂ ಅಧಿಕೃತವಾಗಿ ನಾವಿಬ್ಬರು ವಿಚ್ಛೇದನ ಪಡೆಯುತ್ತಿದ್ದೇನೆ ಎನ್ನುವುದನ್ನ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದರು …ಇಬ್ಬರಿಗೂ ಡಿವೋರ್ಸ್ ಆದ ನಂತರ ಇಬ್ಬರ ಮಧ್ಯೆ ಸಾಕಷ್ಟು ಸಮಸ್ಯೆಗಳಿದೆ ಎಂದು ಅಂತೆಕಂತೆಗಳು ಓಡಾಡಿತ್ತು… ಆದರೆ ನಾವಿಬ್ಬರೂ ಮುಂದಿನ ದಿನಗಳಲ್ಲಿ ಸ್ನೇಹಿತರಾಗಿರುತ್ತೇವೆ ಎಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಬರೆದುಕೊಂಡಿದ್ದರು …
ಸದ್ಯ ವಿಚ್ಛೇದನದ ನಂತರ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದು ಸಮಂತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರೆ ನಾಗಚೈತನ್ಯ ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ …
ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರ ತಮ್ಮ ಹಳೆ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಾರೆ ಅದರಂತೆಯೇ ಸಮಂತಾ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ನಾಗಚೈತನ್ಯ ಜೊತೆ ಇರುವ ಫೋಟೋಗಳನ್ನು ಡಿಲೀಟ್ ಮಾಡಿ ಆಗಿದೆ …ಆದರೆ ನಾಗಚೈತನ್ಯ ಮಾತ್ರ ತನ್ನ ಪತ್ನಿಯೊಂದಿಗಿನ ಸಿಹಿ ನೆನಪುಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ …
ಹೌದು ನಟ ನಾಗಚೈತನ್ಯ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಸಮಂತಾ ಜೊತೆಗಿನ ಫೋಟೋಗಳನ್ನು ಯಾವುದನ್ನೂ ಡಿಲೀಟ್ ಮಾಡದೆ ಹಾಗೇ ಉಳಿಸಿಕೊಂಡಿದ್ದಾರೆ ಇದನ್ನ ನೋಡಿರುವ ನಾಗಚೈತನ್ಯ ಅಭಿಮಾನಿಗಳು ನಾಗಚೈತನ್ಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ …