ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಆರ್ಯ ಆಗಿ ನಟಿಸುವ ಮೂಲಕ ಸಿನಿಜಗತ್ತಿಗೆ ಪರಿಚಿತರಾದ ಸಂಯುಕ್ತ ಹೆಗ್ಡೆ ಮೊದಲ ಸಿನಿಮಾಕ್ಕೆ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಪ್ರಶಸ್ತಿ ಪಡೆದ ಬ್ಯೂಟಿಫುಲ್ ಬೆಡಗಿ. ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲಿಯೂ ಮೋಡಿ ಮಾಡಿರುವ ಸಂಯುಕ್ತ ಹೆಗ್ಡೆ ಬೋಲ್ಡ್ ಅವತಾರದ ಮೂಲಕ ಪಡ್ಡೆ ಹುಡುಗರ ಮನ ಕದ್ದಿರುವುದು ಕೂಡಾ ನಿಜ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕೀವ್ ಆಗಿರುವ ಕಿರಿಕ್ ಹುಡುಗಿ ಮಾದಕ ಅವತಾರದ ಮೂಲಕ ಗಂಡು ಹೈಕ್ಕಳ ಮನ ಸೆಳೆಯುತ್ತಿರುತ್ತಾರೆ. ಇವಳೇನಾ ಆ ಕಿರಿಕ್ ಕುವರಿ ಎಂದು ನೆಟ್ಟಿಗರು ಆಶ್ಚರ್ಯ ಪಡುವಂತಾಗಿದೆ.
ಹೌದು, ಇತ್ತೀಚೆಗೆ ಪಾರ್ಟಿಯೊಂದರಲ್ಲಿ ತೆಗೆದ ಬೋಲ್ಡ್ ಫೋಟೋವೊಂದನ್ನು ಸಂಯುಕ್ತ ಹಂಚಿಕೊಂಡಿದ್ದಾರೆ. ಗೆಳತಿಯ ಬರ್ತ್ ಡೇ ಯಂದು ನಡೆದ ಪಾರ್ಟಿಯಲ್ಲಿ ಕಪ್ಪು ಬಣ್ಣದ ತುಂಡುಡುಗೆ ಧರಿಸಿದ್ದ ಸಂಯುಕ್ತ ಬೇರೆ ಬೇರೆ ಭಂಗಿಯಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈಕೆಯ ಅವತಾರಕ್ಕೆ ಫುಲ್ ಫಿದಾ ಆಗಿದ್ದಾರೆ.
ಅಂದ ಹಾಗೇ ನೆಟ್ಟಿಗರಿಗೆ ಇದು ಹೊಸತೇನಲ್ಲ. ಇತ್ತೀಚೆಗಷ್ಟೇ ದುಬೈಗೆ ಹೋಗಿದ್ದ ಈಕೆ ಅಲ್ಲಿ ಬ್ಲೂ ಬಿಕಿನಿಯಲ್ಲಿ ತೆಗೆದುಕೊಂಡಿದ್ದ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದರು. ಮಾದಕ ಲುಕ್ ನಿಂದ ಎಷ್ಟೋ ಜನರ ನಿದ್ದೆ ಕದ್ದು ಬಿಟ್ಟಿದ್ದರು.
ಇನ್ನು ಸಂಯುಕ್ತ ಮೊದಲ ಸಿನಿಮಾದಲ್ಲಿ ಯಶಸ್ಸು ಪಡೆದದ್ದೇನೋ ನಿಜ. ಆದರೆ ಸದ್ಯದ ಮಟ್ಟಿಗೆ ಸಿನಿರಂಗದಲ್ಲಿ ಅದುವೇ ಆಕೆಯ ಕೊನೆಯ ಯಶಸ್ಸು ಹೌದು. ಯಾಕೆಂದರೆ ಕಿರಿಕ್ ಪಾರ್ಟಿಯ ನಂತರ ಆಕೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅದು ಸದ್ದು ಮಾಡಿದ್ದು ಕಡಿಮೆಯೇ. ಇದೀಗ ತನ್ನ ಬೋಲ್ಡ್ ಅವತಾರದ ಮೂಲಕ ಸುದ್ದಿಯಲ್ಲಿರುವ ಕಿರಿಕ್ ಹುಡುಗಿ ಮತ್ತೆ ನಟನೆಯ ಮೂಲಕ ಸದ್ದು ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.