ರಾಷ್ಟ್ರೀಯ ಲಾಕ್ ಡೌನ್ ಘೋಷಣೆ ಆಗಿ ಎರಡು ವರ್ಷಗಳೇ ಕಳೆದಿವೆ. ಇದರ ಬಳಿಕ ಎಲ್ಲರ ಬದುಕು ಬದಲಾಗಿದೆ. ಹಲವು ಪಾಠಗಳನ್ನು ಕಲಿಸಿದೆ. ನಟಿ ಸಂಯುಕ್ತ ಹೊರನಾಡು ಅವರ ಬದುಕು ಹೇಗೆ ಬದಲಾಗಿದೆ ಹಾಗೂ ಲಾಕ್ ಡೌನ್ ಅವರಿಗೆ ಏನೇನೆಲ್ಲಾ ಕಲಿಸಿದೆ ಎಂಬುದರ ಕುರಿತಾಗಿ ಹೇಳಿದ್ದಾರೆ.
“ಈ ಎರಡು ವರ್ಷಗಳಲ್ಲಿ ನಾನು ತುಂಬಾ ಬದಲಾಗಿದ್ದೇನೆ ಎಂದು ಅನಿಸುತ್ತದೆ. ಕೋವಿಡ್ ನಿಂದಾಗಿ ನಾನು ಹೊಸ ವ್ಯಕ್ತಿ ಆಗಿದ್ದೇನೆ. ಜನರು, ಜೀವನ ಮತ್ತು ಪರಸ್ಪರ ಹೇಗೆ ಇರಬೇಕು ಎಂಬುದನ್ನು 20 ವರ್ಷಗಳಲ್ಲಿ ಕಲಿಯದ್ದನ್ನು ಕಳೆದ ಎರಡು ವರ್ಷ ಕಲಿಸಿದೆ. ಸಂಕಷ್ಟಗಳು ಜನರಲ್ಲಿ ಉತ್ತಮ ಹಾಗೂ ಕೆಟ್ಟದ್ದನ್ನು ತರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ನಾನು ಸಾಕಷ್ಟು ಕೋವಿಡ್ ಕೆಲಸಗಳನ್ನು ಮಾಡಿದ್ದೇನೆ ಮತ್ತು ನಾನು ವ್ಯವಹರಿಸಿದ ರೀತಿಯ ಜನರು, ನಾನು ನೋಡಿದ ನೋವುಗಳು, ಸಾವುಗಳು ಇವೆಲ್ಲವೂ ಹೇಗೆ ಹೊಂದಿಕೊಳ್ಳುವುದು ಎಂಬುದರ ಕುರಿತು ಹೇಳಿವೆ. ನಾನು ಬದುಕು, ಜನರು ಹಾಗೂ ಘಟನೆಗಳನ್ನು ನೋಡುವ ರೀತಿಯೇ ಬದಲಾಗಿದೆ. ಪ್ಯಾಂಡೆಮಿಕ್ ಒಟ್ಟಿಗೆ ಕೆಲಸ ಮಾಡುವುದು ಹಾಗೂ ಪರಸ್ಪರ ಹೇಗೆ ನೋಡುವುದು ಎಷ್ಟು ಮಹತ್ವದ್ದು ಎಂಬುದನ್ನು ಕಲಿಸಿದೆ” ಎನ್ನುತ್ತಾರೆ ಸಂಯುಕ್ತಾ ಹೊರನಾಡು.
ಇನ್ನು ನಟನೆಯಲ್ಲಿ ಬ್ಯುಸಿಯಾಗಿರುವ ಸಂಯುಕ್ತಾ “ನಾನು ಕ್ಯಾಮೆರಾ ನೋಡುವ ರೀತಿ, ಸೆಟ್ ಗೆ ಮರಳಿದ ನಂತರ ಪ್ರತಿ ಕ್ಷಣವು ನನ್ನ ಕೆಲಸವನ್ನು ನೋಡುವ ರೀತಿ ಅದ್ಭುತವಾಗಿದೆ. ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ ಹಾಗೂ ಸಂಬಂಧವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇದು ನನಗೆ ಆಸಕ್ತಿದಾಯಕವಾದ ಬೆಳವಣಿಗೆಯಾಗಿದೆ” ಎಂದಿದ್ದಾರೆ.