Karnataka Bhagya

ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ಸಂಯುಕ್ತ ಹೆಗ್ಡೆ ಕಿರಿಕ್

ಕಿರಿಕ್ ಪಾರ್ಟಿ ಹಾಗೂ ಕಾಲೇಜ್ ಕುಮಾರ್ ಸಿನಿಮಾಗಳ ನಂತರ ಸ್ಯಾಂಡಲ್ ವುಡ್ ನತ್ತ ತಿರುಗಿಯೂ ನೋಡದ ನಟಿ ಸಂಯುಕ್ತ ಹೆಗ್ಡೆ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಮಾಡಲು ಎಂಟ್ರಿಕೊಟ್ಟಿದ್ದಾರೆ …ಹೌದು ನಟಿ ಸಂಯುಕ್ತ ಹೆಗ್ಡೆ ಶ್ರೇಯಸ್ ಕೆ ಮಂಜು ಅಭಿನಯದ ರಾಣಾ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ..

ವಿಶೇಷ ಅಂದ್ರೆ ರಾಣ ಸಿನಿಮಾದಲ್ಲಿ ಸಂಯುಕ್ತ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಅದರ ಬದಲಾಗಿ ವಿಶೇಷ ಹಾಡೊಂದಕ್ಕೆ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ ಕಂಠೀರವ ಸ್ಟುಡಿಯೋದಲ್ಲಿ ಆರ್ಟ್ ಡೈರೆಕ್ಟರ್ ಶಿವು ನಿರ್ಮಿಸಿರುವ ಅದ್ಧೂರಿ ಸೆಟ್ ನಲ್ಲಿ ಈ ಹಾಡಿನ ಶೂಟಿಂಗ್ ನಡೆಯಲಿದೆ …

ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ನಂದಕಿಶೋರ್ ಈ ಚಿತ್ರವನ್ನು
ನಿರ್ದೇಶಿಸುತ್ತಿದ್ದಾರೆ. ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ , ಶಿವು ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ರಾಣ” ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Scroll to Top
Share via
Copy link
Powered by Social Snap