ಮಹಾರಾಷ್ಟ್ರ ದ ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟ ಪ್ರಕರಣ ಕನ್ನಡಿಗರ ಆಕ್ರೋಶಕ್ಮೆ ಕಾರಣವಾಗಿದೆ…ಕನ್ನಡ ನಾಡು, ನುಡಿ ಹಾಗೂ ಭಾಷೆ ವಿಚಾರದಲ್ಲಿ ಸದಾ ಮುಂದಿರೋ ಸಿನಿಮಾಕಲಾವಿದರು ಭಾವುಟ ಸುಟ್ಟ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ…ಇದೇ ವಿಚಾರವಾಗಿ ಕೋಪಗೊಂಡಿರೋ ಸ್ಟಾರ್ಸ್ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡೋ ಮೂಲಕ ಅಭಿಯಾನ ಶುರು ಮಾಡಿದ್ದಾರೆ …
- ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಿ ಧ್ರುವ ಸರ್ಜಾ
ಭಾಷೆ ಅನ್ನೋದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ.ಕನ್ನಡಧ್ವಜ ನಮ್ಮ #ಸಂಸ್ಕೃತಿಯ ತಿಲಕ.
ಕನ್ನಡಧ್ವಜ ವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ!
ಸರ್ಕಾರ ಈಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕೆನ್ನುವುದು ನನ್ನಂತ ಕೋಟ್ಯಾಂತರ ಕನ್ನಡಿಗರ ಒತ್ತಯ ಎಂದು ಧ್ರುವಾ ಟ್ವೀಟ್ ಮಾಡಿದ್ದಾರೆ….
- ಕನ್ನಡಪರ ಹೋರಾಟಗಾರರನ್ನ ಬಿಡುಗಡೆಗೊಳಿಸಿ ಎಂದ ವಿಜಯ್
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಎಂದು ದುನಿಯಾ ವಿಜಯ್ ಟ್ವೀಟ್ ಮಾಡಿದ್ದಾರೆ…
- ತಾಯ್ನಾಡಿಗೆ ಅಪಮಾನ ಮಾಡಿದವ್ರಿಗೆ ಶಿಕ್ಷೆ ಆಗಲೇಬೇಕೆಂದ ರಿಷಬ್
ನಮ್ಮ ಕರುನಾಡ ಧ್ವಜ ಸುಟ್ಟು, ಕನ್ನಡ ತಾಯಿ, ತಾಯ್ನಾಡಿಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಕನ್ನಡಪರ ಹೋರಟಗಾರರನ್ನ ಬಿಡುಗಡೆ ಮಾಡಬೇಕಾಗಿ ವಿನಂತಿ ಮಾಡಿದ್ದಾರೆ ರಿಷಬ್ ಶೆಟ್ಟಿ
- ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದ ಗಣೇಶ್
ಅವರು ಸುಟ್ಟಿದ್ದು ಧ್ವಜವಲ್ಲ,
ಕನ್ನಡಿಗರ ಸ್ವಾಭಿಮಾನದ ಕಿಚ್ಚು.
ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು.
ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು
- ತಪ್ಪಿತಸ್ತರಿಗೆ ಶಿಕ್ಷೆ ಆಗಲಿ ಎಂದ ಶಿವಣ್ಣ
ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ ಎಂದಿದ್ದಾರೆ ಶಿವರಾಜ್ ಕುಮಾರ್ .
- ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದ ದರ್ಶನ್
ಇನ್ನುನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದ ದರ್ಶನ್ ….