ಕಿರುತೆರೆಯಲ್ಲಿ ಭಾರಿ ಹೆಸರು ಮಾಡಿರುವ ಪ್ರಖ್ಯಾತ ಧಾರಾವಾಹಿ ಕನ್ನಡತಿ…ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು ಧಾರಾವಾಹಿಯಲ್ಲಿ ಸಾನಿಯಾ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ರಮೋಲಾ ಕನ್ನಡತಿ ತಂಡದಿಂದ ಹೊರ ನಡೆದಿದ್ದಾರೆ …

ಚಿಕ್ಕ ವಯಸ್ಸಿನಲ್ಲಿಯೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಪಡೆದುಕೊಂಡು ಅದ್ಭುತವಾಗಿ ನಟಿಸಿ ಸಾಕಷ್ಟು ಪ್ರೇಕ್ಷಕರ ಅಭಿಮಾನವನ್ನ ಗಳಿಸಿದರು ನಟಿ ರಮೋಲಾ… ಅದಷ್ಟೇ ಅಲ್ಲದೆ ಸಾನಿಯ ಪಾತ್ರಕ್ಕೆ ಧಾರಾವಾಹಿಯಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದು ಅದಕ್ಕೆ ತಕ್ಕಂತೆ ಅಭಿನಯ ಮಾಡುತ್ತಾ ಸೈ ಎನಿಸಿಕೊಂಡಿದ್ದರು ರಮೋಲಾ…

ಆದರೆ ಈಗ ಸಾನಿಯ ಪಾತ್ರಧಾರಿ ರಮೋಲಾ ಕನ್ನಡತಿ ತಂಡದಿಂದ ಹೊರ ನಡೆದಿದ್ದಾರೆ.. ಈ ಬಗ್ಗೆ ರಮೋಲಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಇದ್ದು, ಆ ಪಾತ್ರಕ್ಕೆ ಈಗ ಈಗಾಗಲೇ ಹೂಮಳೆ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದ ಆರೋಹಿ ನೈನಾ ಎಂಬ ಕಲಾವಿದೆ ಆಯ್ಕೆಯಾಗಿದ್ದಾರೆ…ಹೊಸ ಕಲಾವಿದೆ ಚಿತ್ರೀಕರಣದಲ್ಲಿಯೂ ಭಾಗಿ ಆಗಿದ್ದು ಕೆಲವೇ ದಿನಗಳಲ್ಲಿ ಹೊಸ ಸಾನಿಯಾ ಪ್ರೇಕ್ಷಕರ ಮುಂದೆ ಬರಲಿದ್ದಾರಡ… ಒಟ್ಟಾರೆ ಕನ್ನಡತಿ ಧಾರಾವಾಹಿ ಪಾತ್ರವರ್ಗ ಹಾಗೂ ಕಥೆಯ ಮೂಲಕ ದಿನದಿಂದ ದಿನಕ್ಕೆ ಪ್ರೇಕ್ಷಕರ ಅಭಿಮಾನವನ್ನ ಹೆಚ್ಚಿ ಮಾಡಿಕೊಳ್ಳುತ್ತಿದೆ
