ಗಂಡ ಹೆಂಡತಿ ಸಿನಿಮಾದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಸಂಜನಾ ಗಲ್ರಾನಿ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುದ್ದು ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿರುವ ಸಂಜನಾ ಇತ್ತೀಚೆಗಷ್ಟೇ ಮೆಟರ್ನಿಟಿ ಫೋಟೋಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
“ನಾನು ಹದಿನೆಂಟು ವರ್ಷ ಆದಾಗಿನಿಂದ ನಗರಗಳ ನಡುವೆ ವಾಸಿಸುತ್ತಿದ್ದೇನೆ. ಐವತ್ತಕ್ಕೂ ಹೆಚ್ಚು ಸಿನಿಮಾ ಹಾಗೂ ಹಲವು ಟಿವಿ ಶೋಗಳು, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಹಲವು ಇವೆಂಟ್ಸ್ ಹಾಗೂ ಉದ್ಘಾಟನೆ ಕಾರ್ಯಕ್ರಮಗಳು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನ ಇದು ನನಗೆ ರೂಢಿಯಾಗಿತ್ತು. 35ನೇ ವಯಸ್ಸಿನಲ್ಲಿ ಕೋವಿಡ್ ನಮ್ಮ ಬದುಕನ್ನು ಬದಲಾಯಿಸಿತು. ಫ್ಯಾಮಿಲಿ ಶುರು ಮಾಡಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ” ಎನ್ನುತ್ತಾರೆ ಸಂಜನಾ ಗಲ್ರಾನಿ.
“ಮಾತೃತ್ವ ಅಳವಡಿಸಿಕೊಳ್ಳುವುದು ಎಂದರೆ ನನ್ನ ವೃತ್ತಿ, ದೇಹ, ದೈಹಿಕ ನೋಟವನ್ನು ಹಾಗೂ ಜೀವನವನ್ನು ಬದಿಗಿರಿಸುವುದು. ನಾನು 18 ಕೆಜಿ ತೂಕ ಹೆಚ್ಚಾಗಿದ್ದೇನೆ. ಕೆಲವೊಮ್ಮೆ ನನ್ನ ಮನಸು ಪ್ರಯಾಣ ಹಾಗೂ ಸಿನಿಮಾವನ್ನು ಬಯಸುತ್ತಿತ್ತು. ಆಗೆಲ್ಲಾ ಮನಸನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದೆ. ಪ್ಲಾಂಟಿಂಗ್ , ಕಾಂಪೋಸ್ಟಿಂಗ್ ಶುರು ಮಾಡಲು ನೆರೆಹೊರೆಯವರಿಗೆ ಪ್ರೋತ್ಸಾಹ ನೀಡುತ್ತಿದ್ದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ” ಎಂದು ಪ್ರೆಗ್ನಿನ್ಸಿ ದಿನಗಳ ಬಗ್ಗೆ ಹೇಳುತ್ತಾರೆ ಸಂಜನಾ.
“ಈಗ ಒಂಭತ್ತು ತಿಂಗಳಿಗೆ ಪ್ರವೇಶಿಸಿದ್ದೇನೆ. ಎರಡು ಜಗತ್ತಿನ ಅತ್ಯುತ್ತಮವಾದದನ್ನು ಎಂಜಾಯ್ ಮಾಡುತ್ತಿದ್ದೇನೆ. ಹಿಂದೂ ಆಗಿ ಹುಟ್ಟಿ ಮುಸಲ್ಮಾನನನ್ನು ಮದುವೆಯಾಗಿದ್ದೇನೆ. ಸೀಮಂತವನ್ನು ಒಬ್ಬಟ್ಟು ಹಾಗೂ ಮಂಗಳೂರು ಸ್ಟೈಲ್ ನ ಸೀಫುಡ್ ನ ರೋಸ್ಟ್ ಹಾಗೂ ನನ್ನ ಇಷ್ಟದ ದಕ್ಷಿಣ ಭಾರತದ ಆಹಾರದ ಮೂಲಕ ಆಚರಿಸಿದ್ದೇನೆ. ರಂಜಾನ್ ನಂತರ ಪತಿಯ ಸಾಂಪ್ರದಾಯಿಕ ಮುಸ್ಲಿಂ ಶೈಲಿಯಲ್ಲಿ ಮಟನ್ ಬಿರಿಯಾನಿ ತಯಾರು ಮಾಡಲಿದ್ದೇವೆ” ಎಂದು ಖಾಸಗಿ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಸಂಜನಾ.