Karnataka Bhagya
Blogವಾಣಿಜ್ಯ

ಚಿತ್ರರಂಗಕ್ಕೆ ಎಂಟ್ರಿಕೊಡಲು ಸಿದ್ದಳಾದ ತೆಂಡೂಲ್ಕರ್ ಪುತ್ರಿ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಚಿತ್ರರಂಗಕ್ಕೆ ಎಂಟ್ರಿಕೊಡುವ ಸಮಯ ಹತ್ತಿರದಲ್ಲೇ ಇದೆ…ಹೌದು ಈಗಾಗಲೇ‌ ಮಗ ಕ್ರಿಕೆಟ್ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಈಗ ಮಗಳು ಸಾರಾ ತೆಂಡೂಲ್ಕರ್ ಬಣ್ಣದ ಲೋಕಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ…

ಇತ್ತೀಚಿನ‌ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸಾರಾ ಹಂಚಿಕೊಳ್ಳುವ ಫೋಟೋ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ… ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಸಾರಾ, ಇಂಗ್ಲೆಂಡ್‌ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಿಂದ ಮೆಡಿಸಿನ್‌ನಲ್ಲಿ ಪದವಿ ಪಡೆದಿದ್ದಾರೆ…

ಸದ್ಯ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಸಾರಾ ತೆಂಡುಲ್ಕರ್… ಸಾರಾ ಹೆಸರುವಾಸಿ ಬಟ್ಟೆ ಕಂಪನಿಯೊಂದಿಗೆ ಮಾಡಲ್ ಆಗಿ ಪೋಸ್ ಕೊಟ್ಟಿದ್ದಾರೆ…ಈ ವಿಡಿಯೋ ಫೋಟೋ ಎಲ್ಲೆಡೆ ಟ್ರೆಂಡ್ ಹುಟ್ಟುಹಾಕಿದೆ…ಸಾರಾ ಲುಕ್ ಗೆ ಎಲ್ಲರೂ ಬೋಲ್ಡ್ ಆಗಿದ್ದು ಸಿನಿಮಾರಂಗಕ್ಕೆ ಎಂಟ್ರಿಕೊಡುವಂತೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ…ಸದ್ಯ ಮಾಡೆಲಿಂಗ್ ಶುರು ಮಾಡಿರೋ ಸಾರಾ ಶೀಘ್ರದಲ್ಲೇ ಫಿಲ್ಮಂ ದುನಿಯಾಗೆ ಎಂಟ್ರಿಕೊಡಲಿದ್ದಾರೆ….

Related posts

ಟಿವಿ ಪರದೆ ಮೇಲೆ ಬರುತ್ತಿದೆ ‘ಜೇಮ್ಸ್’

Nikita Agrawal

ಕೆಜಿಎಫ್ ಬಗ್ಗೆ ಅಧೀರನ ಮನದಾಳದ ಮಾತು

Nikita Agrawal

“777 ಚಾರ್ಲಿ ಸಿನಿಮಾ ಸುಲಭದ ಕೆಲಸವಾಗಿರಲಿಲ್ಲ”-ರಕ್ಷಿತ್ ಶೆಟ್ಟಿ

Nikita Agrawal

Leave a Comment

Share via
Copy link
Powered by Social Snap