ಕನ್ನಡ ಚಿತ್ರರಂಗದ ಹಿರಿಯ ನಟ, ತಮ್ಮ ಸರಳ ನಟನೆ, ಸರಳ ವ್ಯಕ್ತಿತ್ವದಿಂದ ಕನ್ನಡಿಗರೆಲ್ಲರ ಮನಸೆಳೆದಿರುವವರು ಅನಂತ್ ನಾಗ್ ಅವರು. ದಶಕಗಳಿಂದ ವಿಭಿನ್ನ ಸಿನಿಮಾಗಳಲ್ಲಿ, ವಿಭಿನ್ನ ಪಾತ್ರಗಳ ಮೂಲಕ ಜನರನ್ನ ರಂಜಿಸಿರುವ ಇವರು, ಈಗಲೂ ಕೂಡ ಕನ್ನಡದ ಹಲವು ಪ್ರಖ್ಯಾತ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸದ್ಯ ಇವರು ‘ಡಾಕ್ಟರೇಟ್’ ಪದವಿಯ ಗೌರವ ಪಡೆದಿದ್ದಾರೆ.



ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವದ ಸಲುವಾಗಿ ಮೂವರು ಗಣ್ಯರುಗಳಿಗೆ ಜುಲೈ 15ರಂದು ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸಲಾಯಿತು. ಅದರಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದಂತಹ ಕೊಡುಗೆಗಾಗಿ, ಅನಂತ್ ನಾಗ್ ಅವರನ್ನು ‘ಡಾಕ್ಟರೇಟ್’ ಬಿರುದು ನೀಡಿ ಗೌರವಿಸಲಾಯಿತು. ಇವರ ಜೊತೆಗೆ ಖ್ಯಾತ ಶಹನಾಯಿ ವಾದಕರಾದ ಪಂಡಿತ್ ಎಸ್ ಬಲ್ಲೇಶ್ ಭಜಂತ್ರಿ ಹಾಗು ‘ಐಸ್ಪಿರಿಟ್ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರಾದ ಶರದ್ ಶರ್ಮ ಅವರಿಗೂ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.


