Karnataka Bhagya
Blogಇತರೆ

ಮತ್ತೆ ಬರಲಿದ್ದಾನೆ ಸೂಪರ್ ಹೀರೋ ‘ಶಕ್ತಿಮಾನ್’

90ರ ದಶಕದಲ್ಲಿ ತೆರೆಕಂಡ ಹಿಂದಿಯ ಸುಪ್ರಸಿದ್ಧ ಧಾರಾವಾಹಿ ‘ಶಕ್ತಿಮಾನ್’ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಧಾರಾವಾಹಿಯೆಂದರೂ ತಪ್ಪಾಗಲಾರದು. ಇದೊಂಥರಾ ಭಾರತದ ಸೂಪರ್ ಹೀರೋ ಕಾನ್ಸೆಪ್ಟ್ ನ ಮೊದಲ ಧಾರಾವಾಹಿ. ದೂರದರ್ಶನ ವಾಹಿನಿಯಲ್ಲಿ 1997ರಿಂದ 2005 ರವರೆಗೆ ಪ್ರಸಾರವಾದ ಈ ಧಾರಾವಾಹಿಯನ್ನು ಎಲ್ಲ ವಯಸ್ಕರೂ ಮೆಚ್ಚಿಕೊಂಡಿದ್ದರು. ಈಗ ವಿಷಯ ಏನಪ್ಪಾ ಅಂದರೆ ಈ ಧಾರಾವಾಹಿ ಸಿನಿ ರೂಪವನ್ನು ಪಡೆದುಕೊಳ್ಳುತ್ತಿದೆ. ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಶಕ್ತಿಮಾನ್ ಆಗಲು ಹೊರಟಿದ್ದಾರೆ.

ಹಿಂದೊಮ್ಮೆ ಮುಖೇಶ್ ಖನ್ನಾ ಅವರೇ ಈ ಕುರಿತಂತೆ ಮಾತನಾಡಿದ್ದರು. ಅಲ್ಲದೆ ಶಕ್ತಿಮಾನ್ ಆಗಲು ರಣವೀರ್ ಸಿಂಗ್ ಗೂ ಆಸಕ್ತಿ ಇದೆಯಂತೆ. ಈ ಚಿತ್ರವನ್ನು ತೆರೆಗೆ ತರುವುದಾದಲ್ಲಿ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಲು ರಣವೀರ್ ಸಿಂಗ್ ಅವರಿಂದ ಮಾತ್ರ ಸಾಧ್ಯವೆಂಬುದು ನಿರ್ಮಾಪಕರ ಅಭಿಪ್ರಾಯ. ಸದ್ಯಕ್ಕೆ ಮುಖೇಶ್ ಖನ್ನಾ ಅವರೊಂದಿಗೆ ಮಾತುಕತೆಯಲ್ಲಿರುವ ತಂಡ ಹೆಚ್ಚಿನ ಮಾಹಿತಿಯನ್ನೇನೂ ನೀಡಿಲ್ಲ. ಧಾರವಾಹಿಯಾಗಿದ್ದ ಶಕ್ತಿಮಾನ್ ನ ನಿರ್ದೇಶನವನ್ನು ದಿನಕರ್ ಜಾನಿ ನಿಭಾಯಿಸಿದ್ದರು.

ಹಿಂದೊಮ್ಮೆ ಶಕ್ತಿಮಾನ್ ಹೊಸರೂಪದ ಬಗ್ಗೆ ಮಾತನಾಡಿದ್ದ ಮುಖೇಶ್ ಖನ್ನಾ ”ನಾವು ಶಕ್ತಿಮಾನ್ ಪಾರ್ಟ್ 2 ಮಾಡುವುದರ ಬಗ್ಗೆ ಕಾರ್ಯನಿರತರಾಗಿದ್ದೇವೆ. ಅಲ್ಲದೆ ಈ ಶಕ್ತಿಮಾನ್ ಈ ಕಾಲಕ್ಕೆ ಹೊಂದುವ ರೀತಿಯಲ್ಲಿ ಇರುತ್ತದೆ. ಸಮಾಜದ ಮೌಲ್ಯಗಳ ಮೇಲೆ ಕಥೆಯನ್ನು ರಚಿಸಲಾಗುತ್ತದೆ. ಶಕ್ತಿಮಾನ್ ಗೆ ಮುಂದೇನಾಯಿತು ಎಂಬ ಕಾತುರ ಹಲವರಿಗಿದೆ. ಜನರ ಡಿಮ್ಯಾಂಡ್ ದೊಡ್ಡಮಟ್ಟದಲ್ಲಿ ಇರುವುದರಿಂದ ಶಕ್ತಿಮಾನ್ ನ್ನು ಬೇರೆ ಮಟ್ಟದಲ್ಲಿ ಮಾಡ ಹೊರಟಿದ್ದೇವೆ” ಎಂದಿದ್ದರು.



ಈ ಹೇಳಿಕೆ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದ ಅವರು ” ಈ ಕಥೆಯನ್ನು ಸಿನಿಮಾ ಮಾಡಬೇಕೆನ್ನುವ ಬಹು ವರ್ಷಗಳ ಕನಸಿಗೆ ಈಗ ಕಾಲ ಕೂಡಿಬಂದಿದೆ. ಎಲ್ಲ ಕಾಲಕ್ಕೂ ಅನ್ವಯವಾಗುವ ಈ ಕಥೆ ಈ ಕಾಲಕ್ಕೂ ಒಪ್ಪುವಂತಿದೆ. ಒಂದೇ ಹಂತದಲ್ಲಿ ಇಡೀ ಶಕ್ತಿಮಾನ್ ಕಥೆಯನ್ನು ಹೇಳಿ ಮುಗಿಸುವುದು ಕಷ್ಟ ಸಾಧ್ಯ. ಅದಕ್ಕಾಗಿ ಮೂರು ಪಾರ್ಟ್ ಗಳಲ್ಲಿ ಈ ಸಿನಿಮಾವನ್ನು ತರುವ ಯೋಜನೆ ಇದೆ. ಅತ್ಯಾಧುನಿಕ ಹೊಸ ತಂತ್ರಜ್ಞಾನದ ಮೂಲಕ ಶಕ್ತಿಮಾನ್ ಎಲ್ಲರನ್ನೂ
ರಂಜಿಸಲಿದ್ದಾನೆ” ಎಂದಿದ್ದರು.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ರಣವೀರ್ ಸಿಂಗನ್ನು ಶಕ್ತಿಮಾನ್ ಆಗಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಈಗಷ್ಟೇ ತೆರೆಕಂಡಿರುವ ಜಯೇಶ್ ಭಾಯ್ ಜೋರ್ದಾರ್ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲನುಭವಿಸಿತು. ಇದಲ್ಲದೆ ‘ಕರಣ್ ಜೋಹರ್’ ರವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಹಾಗೂ ‘ರೋಹಿತ್ ಶೆಟ್ಟಿ’ ನಿರ್ದೇಶನದ ‘ಸರ್ಕಸ್’ ನಲ್ಲೂ ರಣವೀರ್ ಸಿಂಗ್ ನಟಿಸುತ್ತಿದ್ದಾರೆ.

Related posts

ಮೊದಲ ಬಾರಿಗೆ ವೈದ್ಯೆಯಾಗಿ ರಂಜನಿ ರಾಘವನ್

Nikita Agrawal

ಪಾಸಿಟಿವ್ ಪಾತ್ರದತ್ತ ರಶ್ಮಿತಾ ಚಿತ್ತ

Nikita Agrawal

ದರ್ಶನ್ ಅಭಿಮಾನಿಗಳ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಾಹಿತಿ ಗೊ ರು ಚನ್ನಬಸಪ್ಪ

Karnatakabhagya

Leave a Comment

Share via
Copy link
Powered by Social Snap