Karnataka Bhagya
Blogಕರ್ನಾಟಕ

ಶಶಿಕುಮಾರ್ ಮಗನ ಮೊದಲ ಸಿನಿಮಾದ ಟ್ರೈಲರ್ ರಿಲೀಸ್.

80ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡಂತಹ ಅತಿ ಮುದ್ದಾದ ನಾಯಕ ನಟ ಶಶಿಕುಮಾರ್ ಅವರಾಗಿದ್ದರು ಎಂದರೆ ತಪ್ಪಾಗದು. ಆ ಕಾಲದಲ್ಲೇ ತಮ್ಮ ಮುಖ ಚಹರೆಯಿಂದಲೇ ಸಿನಿರಸಿಕರ ಮನೆಮಾತಾಗಿದ್ದ ಇವರು ‘ಸುಪ್ರೀಂ ಹೀರೋ’ ಎನಿಸಿಕೊಂಡವರು. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದ ಮುಂಚೂಣಿ ನಾಯಕನಟರಲ್ಲಿ ಒಬ್ಬರಾಗಿ ಯಶಸ್ಸು ಕಂಡಿದ್ದ ಇವರು, ಇದೀಗ ತಮ್ಮ ಪುತ್ರನ ಮೊದಲ ಸಿನಿಮಾದ ಬಿಡುಗಡೆಯ ಸಂತಸದಲ್ಲಿದ್ದಾರೆ. ಇವರ ಮಗನಾದ ಅಕ್ಷಿತ್ ಶಶಿಕುಮಾರ್ ಅವರ ಮೊದಲ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಓ ಮೈ ಲವ್’ ಎಂದು ಹೆಸರಿಡಲಾಗಿದೆ.

ಸ್ಮೈಲ್ ಶ್ರೀನು ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾವನ್ನು ಜಿ ರಾಮಾಂಜಿನಿ ಅವರು ‘ಜಿ ಸಿ ಬಿ ಪ್ರಾಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ‘ಓ ಮೈ ಲವ್’ ನಲ್ಲಿ ಅಕ್ಷಿತ್ ಅವರಿಗೆ ನಾಯಕಿಯಾಗಿ ಕೀರ್ತಿ ಕಲಕೇರಿ ಅವರು ನಟಿಸಿದ್ದು, ಹೀರೋ ಹೀರೋಯಿನ್ ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಕನ್ನಡದ ಹಿರಿಯ ನಟ ನಿರ್ಮಾಪಕ ಎಸ್ ನಾರಾಯಣ್, ಸಾಧು ಕೋಕಿಲ, ಪವಿತ್ರ ಲೋಕೆಶ್, ಮುಂತಾದ ಹೆಸರಾಂತ ನಟರು ನಟಿಸಿದ್ದಾರೆ. ಇದೇ ಜುಲೈ 15ರಿಂದ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ ನಾರಾಯಣ್ ಅವರು, “ಶಶಿಕುಮಾರ್ ಅವರು ಕನ್ನಡದಲ್ಲಿ ಸುಪ್ರೀಂ ಹೀರೋ ಆಗಿ ಮೆರೆದವರು. ಇದೀಗ ಅವರ ಮಗನ ಪರ್ವ. ಈ ಸಿನಿಮಾದ ಮೂಲಕ ಕನ್ನಡಕ್ಕೆ ಒಂದೊಳ್ಳೆ ಚಿತ್ರತಂಡ ಸಿಗುವುದಂತೂ ಖಚಿತ. ನಾನು ಕೂಡ ನಾಯಕಿಯ ತಂದೆಯ ಪಾತ್ರ ಮಾಡಿದ್ದೇನೆ. ಲವ್ ಸ್ಟೋರಿಯುಳ್ಳ ಸಿನಿಮಾವನ್ನು ಪ್ರೇಕ್ಷಕರು ಕೈ ಬಿಡುವುದಿಲ್ಲ. ಈ ಚಿತ್ರದಲ್ಲೂ ಒಳ್ಳೆಯ ಕಥೆ ಇದೆ” ಎಂದೂ ಹೇಳುತ್ತಾ ಶುಭಹಾರೈಸಿದರು.

ಶಶಿಕುಮಾರ್ ಮಾತನಾಡಿ, “ನಮ್ಮ ಕಾಲ ಮುಗಿಯಿತು, ಇನ್ನೇನಿದ್ದರೂ ಇವರದ್ದೇ. ನನ್ನ ಮೇಲೆ ನೀವು ತೋರಿಸಿದ ಅದೇ ಪ್ರೀತಿ ವಿಶ್ವಾಸ ನನ್ನ ಮಗನ ಮೇಲು ತೋರಿಸುತ್ತೀರಾ ಎಂಬ ನಂಬಿಕೆಯಿದೆ ” ಎಂದು ಹೇಳಿದರು. ಇದೊಂದು ಮೊಡ್ರನ್ ಪ್ರೇಮಕತೆ ಆಗಿರಲಿದ್ದು, ಇದೇ ಜುಲೈ 15ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

Related posts

ಹೀಗಿದೆ ನೋಡಿ ಕಿರುತೆರೆ ರಾಧೆಯ ನಟನಾ ಜರ್ನಿ

Nikita Agrawal

ಬಾಹುಬಲಿಯ ಜೊತೆಗೂಡಿ ಹೊಸ ಸಾಮ್ರಾಜ್ಯ ಕಟ್ಟಲಿದ್ದಾರೆ ಕರಣ್ ಜೋಹಾರ್..

Nikita Agrawal

ಮಾಡೆಲಿಂಗ್ ನಿಂದ ನಟನೆಯವರೆಗೆ ಆಸಿಯಾ ಪಯಣ

Nikita Agrawal

Leave a Comment

Share via
Copy link
Powered by Social Snap