26.8 C
Bengaluru
February 11, 2026
Karnataka Bhagya
Blogಕರ್ನಾಟಕ ಭಾಗ್ಯ ವಿಶೇಷ

ಸೂಪರ್ ವುಮೆನ್ ಅವತಾರದಲ್ಲಿ ಬಾಲಿವುಡ್ ಬೆಡಗಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇನ್ಸ್ಟಾ ಗ್ರಾಂ ನಲ್ಲಿ ಸೂಪರ್ ವುಮೆನ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮರಳಿದ್ದಾರೆ. ತಮ್ಮ ಮುಂದಿನ ಚಿತ್ರ ನಿಕಮ್ಮಾ ದ ಘೋಷಣೆ ಕೂಡಾ ಈ ಸಂದರ್ಭದಲ್ಲಿ ಆಕೆ ಮಾಡಿದ್ದಾರೆ.

ತಮ್ಮ ಮುಂದಿನ ಚಿತ್ರವನ್ನು ವಿಡಿಯೋ ಮೂಲಕ ಘೋಷಿಸಿರುವ ಶಿಲ್ಪಾ “ನಾವು ಈಗ ಹೊಚ್ಚ ಹೊಸ ಅವತಾರದಲ್ಲಿ ಮಾತನಾಡುತ್ತಿದ್ದೇವೆ. ಯಾರು ನಿಜವಾದ ಅವನಿ? ಸ್ವಲ್ಪ ಪ್ರೀತಿಯನ್ನು ತೋರಿಸಿ. ಹೆಚ್ಚಿನದಕ್ಕಾಗಿ ಈ ಜಾಗವನ್ನು ವೀಕ್ಷಿಸಿ‌. ಮರೆಯದಿರಿ. ಮೇ 17ರಂದು ನಿಕಮ್ಮಾ ಟ್ರೇಲರ್ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಶಿಲ್ಪಾ ಈ ಮೊದಲು ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವನಿಯಾಗಿ ರಂಜಿಸಲು ಬರುತ್ತಿದ್ದಾರೆ. ಸಬೀರ್ ಖಾನ್ ಈ ಚಿತ್ರದ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ 14 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಿದ್ದಾರೆ. ಈ ಸಿನಿಮಾದಲ್ಲಿ ಅಭಿಮನ್ಯು ಹಾಗೂ ಶಿರ್ಲೆ ಸೇಠಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೂನ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Related posts

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ

Nikita Agrawal

ಸಲ್ಲು ಮೆಚ್ಚಿನ ಸ್ಥಳವಾದ ಪಾರ್ಮ್ ಹೌಸ್ ಬೆಲೆ ಬರೋಬ್ಬರಿ ಎಷ್ಟು ಕೋಟಿ ಗೊತ್ತಾ..?!

Nikita Agrawal

ವಿಚ್ಛೇದನದ ನಂತರವೂ ಪತ್ನಿ ಜತೆಗಿನ ನೆನಪನ್ನ ಉಳಿಸಿಕೊಂಡ ನಾಗಚೈತನ್ಯ

Karnatakabhagya

Leave a Comment

Share via
Copy link
Powered by Social Snap