ಪುನೀತ್ ರಾಜ್ ಕುಮಾರ್ ಅಗಲಿದ ನೋವು ಎಲ್ಲರನ್ನೂ ಕಾಡುತ್ತಿದೆ…ಎಂದೆಂದಿಗೂ ಪುನೀತ್ ನಮ್ಮಲ್ಲಿ ಜೀವಂತ ಅನ್ನೋದು ಪ್ರತಿಯೊಬ್ಬರ ಮನದಾಳದ ಮಾತು …ನಟ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ೨ ಸಿನಿಮಾ ರಿಲೀಸ್ ಆದ ದಿನವೇ ಪುನೀತ್ ಕೊನೆಯುಸಿರೆಳೆದರು.. ಇದೇ ನೋವಿನಲ್ಲಿದ್ದ ಸಿನಿಮಾರಂಗ ಹಾಗೂ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡೋದನ್ನ ನಿಲ್ಲಿಸಿಸದರು..ಕೋಟಿ ಕೋಟಿ ಬಂಡವಾಳ ಹಾಕಿದ ಸಿನಿಮಾಗೆ ಪ್ರೇಕ್ಷಕರು ಬರದೇ ಇರೋ ಕಾರಣ ನಿರ್ಮಾಪಕರು ಕೂಡ ನಷ್ಟ ಅನುಭವಿಸೋ ಸಂದರ್ಭ ಕೂಡ ಎದುರಾಯ್ತು…
ಆದ್ರೆ ತಮ್ಮ ಮನೆಯ ಕಷ್ಟ ತಮಗಷ್ಟೇ ಇರಲಿ ಎಂದು ನಿರ್ಧಾರ ಮಾಡಿದ ನಟ ಶಿವರಾಜ್ ಕುಮಾರ್ ತನ್ನ ಸಹೋದರ ಅಗಲಿದ ನೋವನ್ನ ನುಂಗಿಕೊಂಡು ನಿರ್ಮಾಪಕರ ಬೆಂಬಲಕ್ಕೆ ನಿಂತಿದ್ದಾರೆ… ಭಜರಂಗಿ-2 ರಿಲೀಸ್ ದಿನವೇ ಪುನೀತ್ ಅಗಲಿಕೆಯಾಯ್ತು..ಹೀಗಾಗಿ ಕೆಲವು ದಿನ ಥಿಯೇಟರ್ ನಲ್ಲಿ ಭಜರಂಗಿ ದರ್ಶನಕ್ಕೆ ಬ್ರೇಕ್ ಬಿದ್ದಿತ್ತು ಈಗ ಮತ್ತೆ ಸಿನಿಮಾ ನೋಡಲು ಪ್ರೇಕ್ಷಕರು ಮನಸ್ಸು ಮಾಡುವಂತೆ ಮಾಡಲು ಶಿವರಾಜ್ ಕುಮಾರ್ ತಾವೇ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಣೆ ಮಾಡಿದ್ದಾರೆ….
ಗಾಂಧಿನಗರದ ಅನುಪಮ ಚಿತ್ರಂಮದಿರಲ್ಲಿ ಭಜರಂಗಿ ೨ ಸಿನಿಮಾ ನೋಡಿದ್ದಾರೆ ಶಿವರಾಜ್ ಕುಮಾರ್..ಭಜರಂಗಿ -2 ಅಕ್ಟೋಬರ್ 29 ರಂದು ರಿಲೀಸ್ ಆಗಿತ್ತು….ಅಪ್ಪು ಅಗಲಿಕೆ ನೋವಲ್ಲಿ ಭಜರಂಗಿ ದರ್ಶನಕ್ಕೆ ಆಗಮಿಸಿರೋ ಶಿವರಾಜ್ ಕುಮಾರ್ ಕಂಡು ಅಭಿಮಾನಿಗಳಿಗೆ ಆಶ್ಚರ್ಯವಾಗಿದೆ…
ಇದೇ ಸಂದರ್ಭದಲ್ಲಿ ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ…ಶಿವಣ್ಣನ ಜೊತೆಯಾಗಿದ್ದಾರೆ ನಿರ್ದೇಶಕ ಹರ್ಷ…ವಿಲನ್ ಚೆಲುವರಾಜ್