ಮಹಾರಾಷ್ಟ್ರದಲ್ಲಿ ಬಾವುಟ ಸುಟ್ಟ ವಿಚಾರವಾಗಿ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ…ಭಾಷೆ ಎಲ್ಲರಿಗೂ ಮುಖ್ಯ. ಆ ಭಾಷೆಗೆ ಅಗೌರವ ಕೋಡಬೇಡಿ
ಯಾವ ರಾಜ್ಯದಲ್ಲಿ ಯಾವ ಭಾಷೆ ಇದೆಯೋ ಅದಕ್ಕೆ ಮರ್ಯಾದೆ ಕೊಡೋದು ಧರ್ಮ..ಭಾಷೆಗಾಗಿ ನಾನು ಪ್ರಾಣ ಕೊಡೋಕು ಸಿದ್ಧ..ಕನ್ನಡದ ಭಾವುಟ ಸುಡೋದು ಎಷ್ಟು ಸರಿ.. ಅಂತಹ ಕೆಲಸ ಮಾಡಬಾರದು..
ಕರ್ನಾಟಕವನ್ನ ಪ್ರೀತಿಸಬೇಕು.. ನಮಗೆ ಏನು ಪವರ್ ಅಲ್ಲ ಅಂತ ಅಂದುಕೊಳ್ಳಬೇಡಿ...ಮನುಷ್ಯನಿಗೆ ಕೋಪ ಬಂದ್ರೆ ತಡೆದುಕೊಳ್ಲೋದಕ್ಕೆ ಆಗಲ್ಲ..ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು.. ಬರೀ ಓಟಿಗೆ ಮಾತ್ರ ಕಾಯೋದು ಬೇಡ..ನಾನು ತುಂಬಾ ಪ್ರಾಕ್ಟಿಕಲ್ ಆಗಿ ಮಾತಾಡುತ್ತೇನೆ. ನಮ್ಮ ಭಾವುಟ ಸುಟ್ಟು ಹಾಕಿದ್ರೆ ನಮ್ಮ ತಾಯಿಯನ್ನೇ ಸುಟ್ಟ ಹಾಗೆ ಅಲ್ವಾ.ಅದನ್ನೆಲ್ಲಾ ಮಾಡಬೇಡಿ….
ಎಲ್ಲದಕ್ಕು ಮರ್ಯಾದೆ ಕೊಡಬೇಕು.. ಬೇರೆಯವರಿಗೆ ನಾವು ಮರ್ಯಾದೆ ಕೊಡ್ತೇವೆ. ನಮಗೂ ಮರ್ಯಾದೆ ಕೊಡಿ…ನಾವು ಎಲ್ಲಾರಿಗೂ ಜಾಗ ಕೊಡ್ತೀವಿ.. ಎಲ್ಲಾ ಸಿನಿಮಾನೂ ನೋಡಿ. ಬಟ್ ಜಾಸ್ತಿ ಕನ್ನಡ ಸಿನಿಮಾ ನೋಡಿ ಎಂದರು…ಈ ಮೂಲಕ ಕನ್ನಡ ಬಾವುಟ ಸುಟ್ಟ ದ್ರೋಹಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು ಶಿವಣ್ಣ…