ಸ್ಯಾಂಡಲ್ ವುಡ್ ನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ …ಎಲ್ಲರಿಗೂ ಗೊತ್ತಿರುವಂತೆ ಶಿವರಾಜ್ ಕುಮಾರ್ ಅವರಿಗೆ ತಮಿಳುನಾಡಿನಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ…ಚೆನ್ನೈನಲ್ಲೇ ತಮ್ಮ ವಿದ್ಯಾಭ್ಯಾಸ ಹಾಗೂ ಆ್ಯಕ್ಟಿಂಗ್ ಟ್ರೈನಿಂಗ್ ಮುಗಿಸಿದಂತಹ ಶಿವಣ್ಣ ಅವರಿಗೆ ಚೆನ್ನೈ ನಡುವೆ ಅವಿನಾಭಾವ ಸಂಬಂಧವಿದೆ
..
ಚೆನ್ನೈನ ತಮ್ಮ ಸ್ನೇಹಿತರೊಬ್ಬರ ಮಗಳ ಮದುವೆಗೆ ಶಿವಣ್ಣ ಇತ್ತೀಚೆಗಷ್ಟೇ ತೆರಳಿದ್ದು ಅದೇ ಸಮಯದಲ್ಲಿ ತಮಿಳುನಾಡಿನ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ…
ತಮಿಳುನಾಡಿನ ಸಿಎಂ ಆಗಿರುವಂತಹ ಸ್ಟಾಲಿನ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದು ಕೆಲ ಕಾಲ ಅವರ ಮನೆಯಲ್ಲೇ ಕಳೆದಿದ್ದಾರೆ …ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರೂ ಕೂಡ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ… ಸದ್ಯ ಶಿವರಾಜ್ ಕುಮಾರ್ ಹಾಗೂ ಸ್ಟಾಲಿನ್ ಅವರ ಭೇಟಿ ಕುತೂಹಲ ಕೆರಳಿಸಿದ್ದು, ಸದ್ಯ ಇವರಿಬ್ಬರು ಯಾವ ಕಾರಣಕ್ಕೆ ಇವರಿಬ್ಬರು ಭೇಟಿ ಮಾಡಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ… ಆದರೆ ಮೂಲಗಳ ಪ್ರಕಾರ ಇದೊಂದು ಅನೌಪಚಾರಿಕ ಭೇಟಿ ಎಂದು ತಿಳಿದುಬಂದಿದೆ …