ಸ್ಟಾರ್ ನಟರ ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಹೊಸತೇನಲ್ಲ. ಬೋನಿ ಕಪೂರ್ ಹಾಗೂ ಶ್ರೀದೇವಿ ಹಿರಿಯಪುತ್ರಿ ಜಾಹ್ನವಿ ಆಗಲೇ ಚಿತ್ರರಂಗ ಪ್ರವೇಶಿಸಿದ್ದು ಇಲ್ಲಿ ನೆಲೆಯೂರಿದ್ದಾರೆ. ಈಗ ಎರಡನೇ ಪುತ್ರಿ ಖುಷಿ ಕಪೂರ್ ಸರದಿ. ಇಷ್ಟು ದಿನಗಳ ಕಾಲ ನಟನೆಯಿಂದ ದೂರವಿದ್ದ ಖುಷಿ ಕಪೂರ್ ಸದ್ಯದಲ್ಲೇ ಬಾಲಿವುಡ್ ಗೆ ಪ್ರವೇಶಿಸಲಿದ್ದಾರೆ.
ಝೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಈ ವಿಚಾರವನ್ನು ಸ್ವತಃ ಖುಷಿ ಕಪೂರ್ ಅವರ ತಂದೆ ಬೋನಿ ಕಪೂರ್ ಸ್ಪಷ್ಟ ಪಡಿಸಿದ್ದಾರೆ. “ಎಪ್ರಿಲ್ ತಿಂಗಳಿನಿಂದ ಮಗಳು ಖುಷಿ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾಳೆ. ಇದರ ಹೊರತಾಗಿ ಸಿನಿಮಾದ ಬಗ್ಗೆ ಬೇರೆ ಹೆಚ್ಚಿನ ಮಾಹಿತಿಯನ್ನು ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ ಬೋನಿ ಕಪೂರ್.
ಇನ್ನು ಇದರ ಜೊತೆಗೆ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯನಂದ ಕೂಡಾ ಈ ಸಿನಿಮಾದ ಮೂಲಕ ಬಣ್ಣದ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿರುವ ಖುಷಿ ಕಪೂರ್ ಹೊಂದಿರುವ ಫಾಲೋವರ್ಸ್ ಗಳ ಸಂಖ್ಯೆ ಬರೋಬ್ಬರಿ ಏಳು ಲಕ್ಷ. ಇಂತಿಪ್ಪ ಈಕೆ ಇದೀಗ ನಟನೆಗೆ ಕಾಲಿಡಲಿದ್ದು ಇಲ್ಲಿ ಯಶಸ್ಸು ಕಾಣುತ್ತಾರಾ ಎಂದು ನೋಡಬೇಕಾಗಿದೆ.