ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಿಡುಗಡೆಯಾಗಿ ಮೂರು ತಿಂಗಳುಗಳು ಕಳೆದಿದೆ. ಪುಷ್ಟ ಸಿನಿಮಾದ ನೋಟ ಬಂಗಾರವಾಯಿತೇ ಶ್ರೀವಲ್ಲಿ ಮಾತೇ ಮಾಣಿಕ್ಯವಾಯಿತೇ ಹಾಡು ಕನ್ನಡ ಸಿನಿರಂಗದಲ್ಲಿ ಉಂಟು ಮಾಡಿದ ಕ್ರೇಜ್ ಅಷ್ಟಿಷ್ಟಲ್ಲ.
ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಮೂರು ತಿಂಗಳುಗಳು ಕಳೆದಿದ್ದರೂ ಇನ್ನು ಕೂಡಾ ಅಬೇಕರು ಅದೇ ಹಾಡನ್ನು ಗುನುಗುನಿಸುತ್ತಾ ಇದ್ದಾರೆ. ದಿನಕ್ಕೆ ಒಮ್ಮೆಯಾದರೂ ಆ ಹಾಡು ಕಿವಿಗೆ ಬೀಳುವುದಂತೂ ಪಕ್ಕಾ! ಇನ್ನು ರೀಲ್ಸ್ ನಲ್ಲಿಯೂ ಈ ಹಾಡಿನ ಟ್ರೆಂಡ್ ಇನ್ನೂ ಸಾಗುತ್ತಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಹೀಗೆ ದಕ್ಷಿಣ ಭಾರತ ಎಲ್ಲಾ ಭಾಷೆಗಳಲ್ಲೂ ಬಂದ ಈ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದು, ಹಿಂದಿಯಲ್ಲಿ ಜಾವೇದ್ ಅಲಿ ಹಾಡಿದ್ದಾರೆ.
ಇಂತಿಪ್ಪ ಶ್ರೀವಲ್ಲಿ ಹಾಡು ಹಾಡು ಬೆಂಗಾಲಿ ಭಾಷೆಯಲ್ಲಿ ಬಂದಿದೆ. ಖ್ಯಾತ ಗಾಯಕಿ ಉಷಾ ಉತ್ತುಪ್ ಬೆಂಗಾಲಿ ಭಾಷೆಯಲ್ಲಿ ಹಾಡಿದ್ದಾರೆ. ಉಷಾ ಅವರ ಧ್ವನಿಯಲ್ಲಿ ಈ ಹಾಡು ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಾಲಿ ಭಾಷೆಯ ಸಾಹಿತ್ಯವನ್ನು ರಾಜೀವ್ ದುತ್ತಾ ಸಾಹಿತ್ಯ ಬರೆದಿದ್ದು ಈಗಾಗಲೇ ಈ ವಿಡಿಯೋ ವೈರಲ್ ಆಗಿದ್ದು 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.