ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಪ್ರಸಾರವಾಗಿ ವರುಷ ಕಳೆದಿದೆ. ಫೆಬ್ರವರಿ 28 ರಂದು ಸ್ಪರ್ಧಿಗಳೆಲ್ಲಾ ದೊಡ್ಮನೆಯೊಳಗೆ ಮನೆ ಪ್ರವೇಶಿಸಿದ್ದರು. ಈ ಸಂತಸದ ವಿಚಾರವನ್ನು ಶುಭಾ ಪೂಂಜಾ ಅವರೇ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯೊಳಗಿನ ಫೋಟೋವೊಂದನ್ನು ಹಂಚಿಕೊಂಡಿರುವ ಶುಭಾ ಪೂಂಜಾ “ಒಂದು ವರುಷ! ಕಳೆದ ದಿನ ಇದೇ ದಿನ ಬಿಗ್ ಬಾಸ್ ಗೆ ಪ್ರವೇಶ.ಇದೊಂದು ಅದ್ಭುತ ಪಯಣ. ನಾನು ಇದುವರೆಗೂ ನಿಮ್ಮಿಂದ ತುಂಬಾ ಪ್ರೀತಿ ಸ್ವೀಕರಿಸಿದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ. ಬಿಗ್ ಬಾಸ್ ಉತ್ತಮ ಸ್ನೇಹಿತರನ್ನು ರೂಪಿಸಿದೆ. ಮಾತ್ರವಲ್ಲ ಇದರ ಜೊತೆಗೆ ಉತ್ತಮ ನೆನಪುಗಳನ್ನು ಕೂಡಾ ಇದು ರೂಪಿಸಿದೆ. ಮತ್ತೊಮ್ಮೆ ಧನ್ಯವಾದಗಳು ಬಿಗ್ ಬಾಸ್. ಬಿಗ್ ಬಾಸ್ ತಂಡದ ಪ್ರತಿಯೊಬ್ಬರೂ ಇದಕ್ಕಾಗಿ ತುಂಬಾ ದುಡಿದಿದ್ದಾರೆ. ಈ ಮನೆಯ ಪ್ರತಿಯೊಬ್ಬರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ”ಎಂದು ಬರೆದುಕೊಂಡಿದ್ದಾರೆ
ಇದರ ಜೊತೆಗೆ ಆ ಸೀಸನ್ ನ ಉಳಿದ ಸ್ಪರ್ಧಿಗಳಾದ ದಿವ್ಯಾ ಉರುಡುಗ , ವಿಶ್ವನಾಥ್ ಹಾವೇರಿ , ಅರವಿಂದ್ ಕೆಪಿ , ನಿಧಿ ಸುಬ್ಬಯ್ಯ , ವೈಷ್ಣವಿ ಗೌಡ , ಪ್ರಶಾಂತ್ ಸಂಬರ್ಗಿ ಬಿಗ್ ಬಾಸ್ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿಕೊಂಡಿದ್ದಾರೆ.