ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಹಾಗೂ ಕಿರಣ್ ಅಪ್ಪಚ್ಚು ದಂಪತಿಗಳ ಪುತ್ರ ಜಿಯಾನ್ ಅಯ್ಯಪ್ಪನಿಗೆ ಈಗ ಮೂರರ ಹರೆಯ. ಇನ್ ಸ್ಟಾಗ್ರಾಂನಲ್ಲಿ ತನ್ನದೇ ಆದ ಪೇಜ್ ಹೊಂದಿರುವ ಪುಟ್ಟ ಕಂದನ ಫಾಲೋವರ್ಸ್ ಗಳ ಸಂಖ್ಯೆ 25000 ಕ್ಕಿಂತಲೂ ಹೆಚ್ಚು! ಅಂದ ಹಾಗೇ ಮೂರು ವರ್ಷದ ಪೋರ ಹೊಸ ಜರ್ನಿ ಶುರು ಮಾಡಲಿದ್ದಾನೆ.
ಜಿಯಾನ್ ಅಯ್ಯಪ್ಪ ಶಾಲೆಗೆ ಸೇರಿದ್ದು ಜೀವನದ ಹೊಸ ಪಯಣವನ್ನು ಆರಂಭಿಸಿದ್ದೇನೆ. ಮಕ್ಕಳು ಶಾಲೆಗೆ ಹೋಗುವ ಮೊದಲು ಸಾಂಪ್ರದಾಯಿಕವಾಗಿ ಅಕ್ಷರಭ್ಯಾಸ ಮಾಡುವ ಕ್ರಮವಿದ್ದು ಶ್ವೇತಾ ಚೆಂಗಪ್ಪ ಕೂಡಾ ತಮ್ಮ ಮುದ್ದು ಮಗನ ಅಕ್ಷರಾಭ್ಯಾಸವನ್ನು ಮನೆಯಲ್ಲಿ ಸರಳವಾಗಿ ನೆರವೇರಿಸಿದ್ದಾರೆ.
ಮಗನ ಅಕ್ಷರಭ್ಯಾಸದ ಫೋಟೋವನ್ನು ಹಂಚಿಕೊಂಡಿರುವ ಶ್ವೇತಾ ಚೆಂಗಪ್ಪ “ಜಿಯಾನ್ ಅಯ್ಯಪ್ಪನ ಹೊಸ ಜರ್ನಿ ಆರಂಭವಾಗಲಿದೆ. ಹೌದು, ಅವನ ಸ್ಕೂಲ್ ಜರ್ನಿ ಶುರುವಾಗಲಿದೆ. ಇದು ಅವನ ಜೀವನದ ಅತ್ಯಮೂಲ್ಯವಾದ ಕ್ಷಣ. ಜಿಯಾನ್ ಪ್ರಿ ಸ್ಕೂಲ್ ಗೆ ಸೇರಿದ್ದಾನೆ. ಸಮಯ ಕಳೆದದ್ದೇ ಗೊತ್ತಾಗಲಿಲ್ಲ” ಎಂದು ಬರೆದುಕೊಂಡಿದ್ದಾರೆ.
“ಮನೆಯಲ್ಲಿ ಜಿಯಾನ್ ಅಕ್ಷರಭ್ಯಾಸ ಹಾಗೂ ಹೋಮ ಸರಳವಾಗಿ ನಡೆಯಿತು. ಕುಟುಂಬಸ್ಥರು ಈ ಸಂತಸದ ಸಮಯಕ್ಕೆ ಸಾಕ್ಷಿಯಾಗಿದ್ದರು. ಅವನ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕೆ ಬೇಕು. Love you All” ಎಂದು ಶ್ವೇತಾ ಚೆಂಗಪ್ಪ ಹೇಳಿದ್ದಾರೆ.